ಉತ್ತರಪ್ರದೇಶದ ಲಕ್ನೊ, ವಾರಣಾಸಿ ಮತ್ತು ಫೈಜಾಬಾದ್ ನಗರಗಳಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಮೂರು ಬಾಂಬ್ ಸ್ಪೋಟಗಳು ಶುಕ್ರವಾರ ಅಪ್ಪಳಿಸಿದ್ದು, ಭದ್ರತಾ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ.
ಈ ಸ್ಫೋಟಗಳಿಂದ ಕನಿಷ್ಠ 13 ಮಂದಿ ಸತ್ತಿದ್ದು ಅನೇಕ ಮಂದಿ ಗಾಯಗೊಂಡಿದ್ದಾರೆ. ವಾರಾಣಸಿಯಲ್ಲಿ ಸ್ಥಳೀಯ ಕೋರ್ಟ್ ಆವರಣದಲ್ಲಿ ಸ್ಫೋಟ ಸಂಭವಿಸಿದ್ದು, ಆ ಸಂದರ್ಭದಲ್ಲಿ 2000ಕ್ಕೂ ಹೆಚ್ಚು ಮಂದಿ ಕೋರ್ಟ್ ಆವರಣದಲ್ಲಿದ್ದರು.
ಕಿಕ್ಕಿರಿದ ಸ್ಥಳದಲ್ಲಿ ಸ್ಫೋಟ ಸಂಭವಿಸಿದ್ದರಿಂದ 9 ಜನರು ಸತ್ತಿರುವುದು ಖಚಿತವಾಗಿದೆ. ಫೈಜಾಬಾದ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐವರು ಸತ್ತಿರುವುದು ದೃಢಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ವಿವರಗಳಿಗಾಗಿ ಇನ್ನೂ ಕಾಯಲಾಗುತ್ತಿದೆ.
|