ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕೋಮುಸಾಮರಸ್ಯ ಕೆಡಿಸುವುದು ಸ್ಫೋಟದ ಉದ್ದೇಶ
ಉತ್ತರಪ್ರದೇಶದಲ್ಲಿ ಕೋಮುಸಾಮರಸ್ಯವನ್ನು ಕೆಡಿಸುವುದು ಮತ್ತು ರಾಷ್ಟ್ರದ ಕಾನೂನು ವ್ಯವಸ್ಥೆಯನ್ನು ನಡುಗಿಸುವುದು ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಿರುವುದರ ಉದ್ದೇಶ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಶುಕ್ರವಾರ ತಿಳಿಸಿದ್ದಾರೆ. ಈ ಸ್ಫೋಟದಲ್ಲಿ ಭಯೋತ್ಪಾದಕರ ಕೈವಾಡವನ್ನು ಅವರು ತಳ್ಳಿಹಾಕದಿದ್ದರೂ ಅದನ್ನಿನ್ನೂ ಖಚಿತಪಡಿಸಿಲ್ಲ.

ಉತ್ತರಪ್ರದೇಶದಿಂದ ತಲುಪಿರುವ ಮಾಹಿತಿ ಪ್ರಕಾರ ಮೂರು ಸ್ಫೋಟಗಳು ಸಂಭವಿಸಿವೆ ಎಂದು ಅವರು ನುಡಿದರು.ಫೈಜಾಬಾದ್‌ನ್ನು ಅವಳಿ ಸ್ಫೋಟಗಳು ಅಪ್ಪಳಿಸಿವೆ ಎಂದು ಖಚಿತವಲ್ಲದ ವರದಿಗಳು ತಿಳಿಸಿವೆ. ಇದೊಂದು ಪೂರ್ವನಿಯೋಜಿತ ಸಂಚು ಎಂದು ಸಚಿವರು ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿದರು.

ಈ ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ಒಗ್ಗಟ್ಟಾಗಿ ಇರುವಂತೆ ಸ್ಪೋಟ ಪೀಡಿತ ರಾಜ್ಯ ಮತ್ತು ಇಡೀ ರಾಷ್ಟ್ರಕ್ಕೆ ಅವರು ಮನವಿ ಮಾಡಿಕೊಂಡರು. ಗುಪ್ತಚರ ವೈಫಲ್ಯದಿಂದ ಸ್ಫೋಟಗಳು ಸಂಭವಿಸಿದೆ ಎನ್ನುವುದನ್ನು ಸಚಿವರು ನಿರಾಕರಿಸಿದರು.
ಮತ್ತಷ್ಟು
ಉ.ಪ್ರ.ದಲ್ಲಿ ಸರಣಿ ಸ್ಫೋಟ: 7 ಮಂದಿ ಸಾವು
ತಸ್ಲೀಮಾ ನಸ್ರೀನ್ ದೆಹಲಿಗೆ ಪ್ರಯಾಣ
ಮೋದಿ ಬೆಂಬಲಕ್ಕೆ ವಿಎಚ್‌ಪಿ
ಅತ್ಯಾಚಾರಕ್ಕೆ ಬಲಿಯಾದ ದಲಿತ ಮಹಿಳೆ
ರಾಹುಲ್‌ಗೆ ಗ್ರೆನೇಡ್ ಹಾರ ಹಾಕುವ ಯೋಜನೆ
ದೇಶೀಯ ತೈಲ ಬೆಲೆ ಏರಿಕೆಯಿಲ್ಲ:ದೇವೊರಾ