ಮುಂಬೈನ ಲೋಕಂಡವಾಲಾ ಪ್ರದೇಶದಲ್ಲಿ ಗುರುವಾರ ರಾತ್ರಿ ಬಹುಹೊತ್ತಿನ ಬಳಿಕ ರೂಪದರ್ಶಿಯೊಬ್ಬರ ತಾಯಿ ಮತ್ತು ಚಿಕ್ಕಪ್ಪನನ್ನು ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆಮಾಡಿರುವುದು ಪತ್ತೆಯಾಗಿದೆ. ಇದಾದ ಬಳಿಕ ದಾಳಿಕೋರನು ಸ್ವತಃ ಗುಂಡುಹಾರಿಸಿಕೊಂಡು ಮೃತಪಟ್ಟನೆಂದು ಪೊಲೀಸರು ತಿಳಿಸಿದ್ದಾರೆ.
ಅವಿನಾಶ್ ಪಾಟ್ನಾಯಕ್ ಎಂಬ ವ್ಯಕ್ತಿ ರೂಪದರ್ಶಿಯಾದ ಮೂನ್ ಮನಮೋಹನ್ ದಾಸ್ ಎಂಬಾಕೆಗೆ ಅನುರಕ್ತನಾಗಿದ್ದು ಕೆಲವು ತಿಂಗಳ ಹಿಂದೆ ಭುವನೇಶ್ವರದಿಂದ ಮುಂಬೈಗೆ ಆಗಮಿಸಿದ್ದನು. ರೂಪದರ್ಶಿಯು ಕೆಲಸ ಮಾಡುವ ಸ್ಥಳದಲ್ಲಿ ಭೇಟಿ ಮಾಡಿದ್ದ ಅವಿನಾಶ್ ಆಕೆಯನ್ನು ಪ್ರೀತಿಸುತ್ತಿದ್ದನು. ಆದರೆ ರೂಪದರ್ಶಿಯ ತಾಯಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರೆಂದು ಹೇಳಲಾಗಿದೆ.
ಪ್ರೇಮವಂಚಿತನಾದ ಅವಿನಾಶ್ ರೂಪದರ್ಶಿಯ ತಾಯಿ ಮತ್ತು ಚಿಕ್ಕಪ್ಪನನ್ನು ಹತ್ಯೆ ಮಾಡುವ ಮೂಲಕ ಕೋಪ ತೀರಿಸಿಕೊಂಡು ಅವನೂ ಆತ್ಮಹತ್ಯೆ ಮಾಡಿಕೊಂಡನೆಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
|