ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತಸ್ಲೀಮಾ ನಸ್ರೀನ್‌ಗೆ ಸೂಕ್ತ ರಕ್ಷಣೆಗೆ ಕೋರಿಕೆ
ವಿವಾದಾತ್ಮಕ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅವರು ಇಷ್ಟಪಟ್ಟರೆ ಭಾರತೀಯ ಪೌರತ್ವವನ್ನು ನೀಡುವಂತೆ ಲೋಕಸಭೆಯಲ್ಲಿ ಸಿಪಿಐ ಸದಸ್ಯರೊಬ್ಬರು ಶುಕ್ರವಾರ ಒತ್ತಾಯಿಸಿದರು.

ನಸ್ರೀನ್ ಅವರಿಗೆ ವಿರೋಧ ವ್ಯಕ್ತಪಡಿಸಿ ಜೈಪುರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ಬಳಿಕ ಕೋಲ್ಕತಾದಿಂದ ಜೈಪುರಕ್ಕೆ ಅವರನ್ನು ಸ್ಥಳಾಂತರಿಸಿದ ವಿಷಯದ ಬಗ್ಗೆ ಮಾತನಾಡಿದ ಪಕ್ಷದ ಸದಸ್ಯ ಗುರುದಾಸ್ ದಾಸ್‌ಗುಪ್ತಾ ನಸ್ರೀನ್ ಸ್ಥಳವನ್ನು ತ್ಯಜಿಸಿದ್ದು ವಿಷಾದನೀಯ. ನಡೆದ ಘಟನೆಗೆ ತಾವು ಕ್ಷಮೆ ಕೋರುವುದಾಗಿ ಅವರು ನುಡಿದರು. ಸಂಕಷ್ಟದಲ್ಲಿರುವ ಮಹಿಳೆಗೆ ಉಳಿದುಕೊಳ್ಳಲು ಸ್ಥಳವಿರಬೇಕು ಎಂದು ಪ್ರತಿಪಾದಿಸಿದ ಅವರು ಲೇಖಕಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದರು.

ಅವರು ಕೋಲ್ಕತಾದಲ್ಲೇ ಉಳಿದುಕೊಂಡರೆ ತಮಗೆ ಸಂತೋಷವೆಂದು ತಿಳಿಸಿದ ಅವರು ಸೂಕ್ತ ರಕ್ಷಣೆ ನೀಡುವುದಾಗಿ ನುಡಿದರು. ಬಾಂಗ್ಲಾದೇಶಿ ಲೇಖಕಿ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದರೆ ಭಾರತದ ಅತ್ಯುನ್ನತ ಸಂಪ್ರದಾಯಕ್ಕೆ ಅನುಗುಣವಾಗಿ ಸರ್ಕಾರ ಅದನ್ನು ಪರಿಗಣಿಸಬೇಕೆಂದು ಅವರು ನುಡಿದರು.

ತಮ್ಮ ಬೇಡಿಕೆಗೆ ದಲಾಯಿಲಾಮ ಪ್ರಕರಣವನ್ನು ಅವರು ಸಮರ್ಥಿಸಿಕೊಂಡಾಗ ಅದ್ಯಕ್ಷ ಸ್ಥಾನದಲ್ಲಿದ್ದ ಮೋಹನ್ ಸಿಂಗ್ ಅವರೆಡು ಭಿನ್ನವಾದ ಪ್ರಕರಣಗಳು ಎಂದು ಪ್ರತಿಕ್ರಿಯಿಸಿದರು. ನಸ್ರೀನ್ ಅವರಿಗೆ ಅವರ ರಾಷ್ಟ್ರದಲ್ಲೇ ಅಪಮಾನ ಮತ್ತು ಕಿರುಕುಳ ನೀಡಲಾಯಿತೆಂದು ಹೇಳಿದ ದಾಸ್‌ಗುಪ್ತಾ ಪ್ರಖ್ಯಾತ ಲೇಖಕಿ ತಾವು ಭಾರತಲ್ಲೇ ಬದುಕಿ, ಇಲ್ಲೇ ಸಾಯುವುದಾಗಿ ಹೇಳಿರುವುದನ್ನು ಉಲ್ಲೇಖಿಸಿದರು.

ರಾಷ್ಟ್ರವು ಯಾವುದೇ ರೀತಿಯ ಮೂಲಭೂತವಾದಕ್ಕೆ ಶರಣಾಗಬಾರದು ಎಂದು ಅವರು ಪ್ರತಿಪಾದಿಸಿದರು. ಆದರೆ ದಾಸ್‌ಗುಪ್ತಾ ಕೋರಿಕೆಯನ್ನು ಬಿಎಸ್‌ಪಿಯ ಇಲಿಯಾಸ್ ಅಜ್ಮಿ ವಿರೋಧಿಸಿ ಸಭಾತ್ಯಾಗ ಮಾಡಿದರು.
ಮತ್ತಷ್ಟು
ಪ್ರೇಮಭಗ್ನ:ಇಬ್ಬರ ಕೊಲೆಯಲ್ಲಿ ಅಂತ್ಯ
ಕೋಮುಸಾಮರಸ್ಯ ಕೆಡಿಸುವುದು ಸ್ಫೋಟದ ಉದ್ದೇಶ
ಉ.ಪ್ರ.ದಲ್ಲಿ ಸರಣಿ ಸ್ಫೋಟ: 13 ಮಂದಿ ಸಾವು
ತಸ್ಲೀಮಾ ನಸ್ರೀನ್ ದೆಹಲಿಗೆ ಪ್ರಯಾಣ
ಮೋದಿ ಬೆಂಬಲಕ್ಕೆ ವಿಎಚ್‌ಪಿ
ಅತ್ಯಾಚಾರಕ್ಕೆ ಬಲಿಯಾದ ದಲಿತ ಮಹಿಳೆ