ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಉ.ಪ್ರ. ಸರಣಿ ಸ್ಫೋಟ ಪ್ರತೀಕಾರವೇ?
ND
ಉತ್ತರಪ್ರದೇಶದ ಸಿವಿಲ್ ಕೋರ್ಟ್ ಆವರಣಗಳಲ್ಲಿ ಸರಣಿ ಸ್ಫೋಟದ ಮೂರು ಪ್ರಕರಣಗಳು ಸಂಭವಿಸಲು ಕಾರಣವೇನಿರಬಹುದು? ರಾಹುಲ್ ಗಾಂಧಿಯನ್ನು ಅಪಹರಣಕ್ಕೆ ಸಂಚು ನಡೆಸಿದ ಮೂವರು ಜೆಇಎಂ ಉಗ್ರಗಾಮಿಗಳನ್ನು ವಕೀಲರು ಸೆಷನ್ಸ್ ಕೋರ್ಟ್ ಆವರಣದಲ್ಲಿ ಶನಿವಾರ ಥಳಿಸಿದ ಬೆನ್ನ ಹಿಂದೆಯೇ ಸರಣಿ ಸ್ಫೋಟಗಳು ಸಂಭವಿಸಿರುವುದು ಶಂಕೆಗೆ ಆಸ್ಪದ ಕಲ್ಪಿಸಿದೆ.

ಜೆಇಎಂ ಉಗ್ರಗಾಮಿಗಳ ಮೇಲೆ ವಕೀಲರು ಹಲ್ಲೆ ಮಾಡಿದ್ದಕ್ಕೆ ಪ್ರತೀಕಾರದ ಕ್ರಮವಾಗಿ ಕೋರ್ಟ್‌ಗಳನ್ನು ದಾಳಿಗೆ ಗುರಿಮಾಡಲಾಗಿದೆಯೇ ಎಂದು ಗುಪ್ತಚರ ಮೂಲಗಳು ತನಿಖೆ ನಡೆಸುತ್ತಿವೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ. ಭದ್ರತಾ ಸಿಬ್ಬಂದಿಗಳು ಜೆಎಂಎಂ ಉಗ್ರಗಾಮಿಗಳನ್ನು ಕೋರ್ಟ್‌ಗೆ ಕರೆದೊಯ್ಯುತ್ತಿದ್ದಾಗ ಉದ್ರಿಕ್ತ ವಕೀಲರು ಉಗ್ರಗಾಮಿಗಳ ಮೇಲೆ ಹಲ್ಲೆ ಮಾಡಿದ್ದರು.

ಉಗ್ರಗಾಮಿಗಳನ್ನು ಗಲ್ಲಿಗೇರಿಸಬೇಕೆಂದು ಘೋಷಣೆ ಕೂಗಿದ ವಕೀಲರು ಸುತ್ತುವರಿದಾಗ ಉಗ್ರರನ್ನು ರಕ್ಷಿಸಲು ಪೊಲೀಸರು ಹೆಣಗಾಡಿದರು. ಜುಲೈ 2005ರಂದು ರಾಮಜನ್ಮಭೂಮಿ ಮೇಲೆ ದಾಳಿಗೆ ಸಂಬಂಧಪಟ್ಟಂತೆ ಬಂಧಿತರಾದ ಐವರು ಉಗ್ರಗಾಮಿಗಳು ತಮ್ಮ ಪರ ವಾದಕ್ಕೆ ವಕೀಲರನ್ನು ನೇಮಿಸಲು ಕೂಡ ವಿಫಲರಾಗಿದ್ದಾರೆ.

ಫೈಜಾಬಾದ್ ವಕೀಲರ ಸಂಘವು ಉಗ್ರಗಾಮಿಗಳನ್ನು ಪ್ರತಿನಿಧಿಸದಂತೆ ನಿಷೇಧ ಹೇರಿದ್ದು ಇದಕ್ಕೆ ಕಾರಣ. ವಕೀಲರ ಲಭ್ಯತೆಯಿಲ್ಲದೇ ವಿಚಾರಣೆಯನ್ನು ಪದೇ ಪದೇ ಮುಂದೂಡಲಾಗಿತ್ತು. ಈ ಕೋನವು ಸೇರಿದಂತೆ ಸ್ಪೋಟದ ಎಲ್ಲ ಅಂಶಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮತ್ತಷ್ಟು
ಉಪಾಹಾರ್ ಮಾಲೀಕರಿಗೆ 2 ವರ್ಷ ಶಿಕ್ಷೆ
ತಸ್ಲೀಮಾ ನಸ್ರೀನ್‌ಗೆ ಸೂಕ್ತ ರಕ್ಷಣೆಗೆ ಕೋರಿಕೆ
ಪ್ರೇಮಭಗ್ನ:ಇಬ್ಬರ ಕೊಲೆಯಲ್ಲಿ ಅಂತ್ಯ
ಕೋಮುಸಾಮರಸ್ಯ ಕೆಡಿಸುವುದು ಸ್ಫೋಟದ ಉದ್ದೇಶ
ಉ.ಪ್ರ.ದಲ್ಲಿ ಸರಣಿ ಸ್ಫೋಟ: 13 ಮಂದಿ ಸಾವು
ತಸ್ಲೀಮಾ ನಸ್ರೀನ್ ದೆಹಲಿಗೆ ಪ್ರಯಾಣ