ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಇಂದು ಉತ್ತರ ಪ್ರದೇಶ ಬಂದ್
ಉತ್ತರ ಪ್ರದೇಶದಲ್ಲಿ ಶುಕ್ರವಾರ ನಡೆದ ವಿಧ್ವಂಸಕ ಕೃತ್ಯಗಳನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಇದೊಂದು ಹೇಡಿತನದ ಕೃತ್ಯವೆಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ದುರ್ಘಟನೆಯಲ್ಲಿ ಸತ್ತವರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಕೇಂದ್ರದಿಂದ ಪರಿಹಾರ ನೀಡಲಾಗುವುದು ಅಲ್ಲದೆ ತೀವ್ರವಾಗಿ ಗಾಯಗೊಂಡವರಿಗೆ ತಲಾ ಐವತ್ತು ಸಾವಿರ ರೂಪಾಯಿ ನೇರವು ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.

ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಬುಡಮೇಲು ಮಾಡಲು ಉಗ್ರರು ಈ ಕೃತ್ಯವನ್ನು ಎಸೆಗಿದ್ದು, ನಾವು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಶ್ರೀಪ್ರಕಾಶ ಜೈಸ್ವಾಲ್ ಗುಡುಗಿದ್ದಾರೆ.

ಏತನ್ಮಧ್ಯೆ, ಈ ಘಟನೆಯನ್ನು ಖಂಡಿಸಿ ಉತ್ತರ ಪ್ರದೇಶ ಬಾಂಬ್ ಸ್ಫೋಟ ಘಟನೆ ಖಂಡಿಸಿ ಬಿಜೆಪಿ, ವಿಎಚ್‌ಪಿ ಮತ್ತು ಉತ್ತರ ಪ್ರದೇಶ ವಕೀಲರ ಸಂಘ ಶನಿವಾರ ರಾಜ್ಯಬಂದ್‌ಗೆ ಕರೆ ನೀಡಿವೆ.

ಉತ್ತರ ಪ್ರದೇಶದ ವಾರಣಾಸಿ, ಫೈಜಾಬಾದ್ ಮತ್ತು ಲಕ್ನೋಗಳ ಆರು ಪ್ರದೇಶಗಳಲ್ಲಿ ದುಷ್ಕರ್ಮಿಗಳು ಶುಕ್ರವಾರ ನಡೆಸಿರುವ ಬಾಂಬ್ ದಾಳಿಯಲ್ಲಿ ಒಟ್ಟು 14 ಮಂದಿ ಮೃತರಾಗಿದ್ದು, 50ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ.

ಸ್ಫೋಟದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶವಲ್ಲದೆ ರಾಷ್ಟ್ರದ ಇತರ ಸೂಕ್ಷ್ಮ ಪ್ರದೇಶಗಳಾಗಿರುವ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ
ಮತ್ತಷ್ಟು
ಉ.ಪ್ರ. ಸರಣಿ ಸ್ಫೋಟ ಪ್ರತೀಕಾರವೇ?
ಉಪಾಹಾರ್ ಮಾಲೀಕರಿಗೆ 2 ವರ್ಷ ಶಿಕ್ಷೆ
ತಸ್ಲೀಮಾ ನಸ್ರೀನ್‌ಗೆ ಸೂಕ್ತ ರಕ್ಷಣೆಗೆ ಕೋರಿಕೆ
ಪ್ರೇಮಭಗ್ನ:ಇಬ್ಬರ ಕೊಲೆಯಲ್ಲಿ ಅಂತ್ಯ
ಕೋಮುಸಾಮರಸ್ಯ ಕೆಡಿಸುವುದು ಸ್ಫೋಟದ ಉದ್ದೇಶ
ಉ.ಪ್ರ.ದಲ್ಲಿ ಸರಣಿ ಸ್ಫೋಟ: 13 ಮಂದಿ ಸಾವು