ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪರಿಹಾರಕ್ಕೆ ಗ್ರಾಹಕ ವೇದಿಕೆ ಆದೇಶ
ನಾಲ್ಕು ಲಕ್ಷ ರೂ. ಸಾಲ ಮರುಪಾವತಿ ಮಾಡಿಲ್ಲವೆಂದು ಮಹಿಳೆಯೊಬ್ಬರ ಕಾರನ್ನು ಖಾಸಗಿ ಬ್ಯಾಂಕೊಂದರ ವಸೂಲಾತಿ ಏಜೆಂಟರು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಗ್ರಾಹಕ ವಿವಾದ ಪರಿಹಾರ ವೇದಿಕೆಯೊಂದು ಆದೇಶ ನೀಡಿದೆ. 30 ದಿನಗಳೊಳಗೆ ಪರಿಹಾರ ನೀಡುವಂತೆ ಬ್ಯಾಂಕಿಗೆ ಸೂಚಿಸಿರುವುದಾಗಿ ವೇದಿಕೆಯ ಹೆಚ್ಚುವರಿ ನ್ಯಾಯಾಧೀಶ ಎಸ್.ಜೆ. ಕ್ಷಿರ್‌ಸಾಗರ್ ಮಾಧ್ಯಮಕ್ಕೆ ತಿಳಿಸಿದರು.

ಬಂಡ್ವಾಕರ್ ದೂರಿನ ಆಧಾರದ ಮೇಲೆ ತನ್ನ ಆದೇಶ ನೀಡಿದ ವೇದಿಕೆ ಸಾಲಗಾರರಿಗೆ ಉಂಟಾದ ಮಾನಸಿಕ ಕಿರುಕುಳಕ್ಕೆ ಪರಿಹಾರಾರ್ಥವಾಗಿ ಬ್ಯಾಂಕ್ ಈ ಮೊತ್ತವನ್ನು ನೀಡಬೇಕೆಂದು ಹೇಳಿದೆ.

ತನ್ನ ಬ್ಯಾಂಕಿನಲ್ಲಿ ಸಾಕಷ್ಟು ಹಣವಿದ್ದು ಮುಂದಿನ ದಿನಾಂಕದ ಚೆಕ್‌ಗಳನ್ನು ನೀಡಿ, ಸಾಲದ ಕಂತನ್ನು ಉಳಿತಾಯ ಖಾತೆಯಿಂದ ವಸೂಲಿ ಮಾಡುವಂತೆ ತಾವು ಬ್ಯಾಂಕಿಗೆ ಸೂಚಿಸಿದ್ದರೂ ಐಸಿಸಿಐ ಬ್ಯಾಂಕ್ ತಮ್ಮ ಸೂಚನೆಯನ್ನು ಪಾಲಿಸಲಿಲ್ಲ ಎಂದು ಮಹಿಳೆ ದೂರಿದ್ದಾರೆ. ಲ್ಯಾಪ್‍ಟಾಪ್ ಅಳವಡಿಸಿದ್ದ ಕಾರನ್ನು ಅಂತಿಮವಾಗಿ ಸ್ವಾಧೀನಕ್ಕೆ ತೆಗೆದುಕೊಂಡಾಗ ಅದು ಹಾನಿಕರ ಸ್ಥಿತಿಯಲ್ಲಿತ್ತು ಎಂದು ಅವರು ದೂರಿದ್ದಾರೆ.
ಮತ್ತಷ್ಟು
ಇಂದು ಉತ್ತರ ಪ್ರದೇಶ ಬಂದ್
ಉ.ಪ್ರ. ಸರಣಿ ಸ್ಫೋಟ ಪ್ರತೀಕಾರವೇ?
ಉಪಾಹಾರ್ ಮಾಲೀಕರಿಗೆ 2 ವರ್ಷ ಶಿಕ್ಷೆ
ತಸ್ಲೀಮಾ ನಸ್ರೀನ್‌ಗೆ ಸೂಕ್ತ ರಕ್ಷಣೆಗೆ ಕೋರಿಕೆ
ಪ್ರೇಮಭಗ್ನ:ಇಬ್ಬರ ಕೊಲೆಯಲ್ಲಿ ಅಂತ್ಯ
ಕೋಮುಸಾಮರಸ್ಯ ಕೆಡಿಸುವುದು ಸ್ಫೋಟದ ಉದ್ದೇಶ