ಸಿಖ್ಖರ ಪ್ರಥಮ ಗುರುವಾದ ಗುರು ನಾನಕ್ ದೇವ್ ಅವರ 538ನೆ ಜನ್ಮ ದಿನವನ್ನು ಸಿಖ್ ಭಕ್ತರು ಶನಿವಾರ ಆಚರಿಸಿದರು. ಹಿಂದು ಭಕ್ತರು ಕಾರ್ತಿಕ ಪೂರ್ಣಿಮೆ ಅಂಗವಾಗಿ ಪ್ರಾರ್ಥನೆಗಳನ್ನು ಸಲ್ಲಿಸಿದರು. ನೂರಾರು ಸಿಖ್ ಭಕ್ತರು ಅಮೃತಸರದ ಸುವರ್ಣ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಹಿಂದು, ಮುಸ್ಲಿಮರು ಮತ್ತು ಕ್ರೈಸ್ತರು ಪ್ರತಿಯೊಬ್ಬರೂ ಇಲ್ಲಿಗೆ ಬರುತ್ತಾರೆ ಎಂದು ರೋಹ್ಟಕ್‌ನ ಭಕ್ತ ಬುಧ್‌ರಾಂ ಭಾರದ್ವಾಜ್ ಹೇಳುತ್ತಾರೆ. ಸಿಖ್ಖರ ಪವಿತ್ರ ಗ್ರಂಥವನ್ನು ಹಿಡಿದ ಭಕ್ತರು ಮಂತ್ರಗಳನ್ನು ಉಚ್ಚರಿಸಿದರು. ಮೆರವಣಿಗೆಯ ನೇತೃತ್ವವನ್ನು ಪುಂಜ್ ಪಿಯಾರಾಸ್ ವಹಿಸಿದ್ದರು. ಮೆರವಣಿಗೆಯು ಅಕಾಲ್ ತಕ್ತ್‌ನಿಂದ ಆರಂಭವಾಗಿ ನಗರದ ಅಲಂಕೃತ ಬೀದಿಗಳಲ್ಲಿ ಸಾಗಿತು, ಭಕ್ತರು ಆಯೋಜಿಸಿದ ಸಮುದಾಯದ ಭೋಜನವಾದ ಲಾಂಗಾರ್‌ನಲ್ಲಿ ಚಪಾತಿ, ದಾಲ್, ಬೇಳೆಕಾಳು ತಿನಿಸನ್ನು ಬಡಿಸಲಾಯಿತು.
ಈ ಆಚರಣೆಯಲ್ಲಿ ಮೂರು ದಿನಗಳ ಅಖಂಡ ಪತ್ ಕೂಡ ಇರುತ್ತದೆ. ಆ ಸಂದರ್ಭದಲ್ಲಿ ಗುರು ಗ್ರಂಥ ಸಾಹಿಬ್‌ನ್ನು ಸತತವಾಗಿ ಆರಂಭದಿಂದ ಕೊನೆವರೆಗೆ ಓದಲಾಗುತ್ತದೆ. ಏತನ್ಮಧ್ಯೆ ಕಾರ್ತಿಕ ಪೂರ್ಣಿಮೆಯ ದಿನವಾದ ಇಂದು ಒರಿಸ್ಸಾದಲ್ಲಿ ನೂರಾರು ಹಿಂದು ಭಕ್ತರು ಪವಿತ್ರ ಬಿಂದುಸಾಗರ್ ಕೊಳದಲ್ಲಿ ಕಲೆತು ಬೊಯ್ಟಾ ಬಂಧನ ಸಮಾರಂಭ(ದೋಣಿ ಪೂಜಿಸುವ ಸಮಾರಂಭ)ವನ್ನು ಆಚರಿಸಿದರು.
ರಾಜ್ಯದ ಕಡಲಿನ ವೈಭವದ ದಿನಗಳನ್ನು ಸ್ಮರಿಸುವ ಆ ಸಮಾರಂಭದಲ್ಲಿ ಜನರು ದೀಪಗಳನ್ನು ಹೊಂದಿರುವ ಸಣ್ಣ ದೋಣಿಗಳನ್ನು ನದಿಯಲ್ಲಿ ತೇಲಿಬಿಟ್ಟರು. ಕಾರ್ತಿಕ ಪೂರ್ಣಿಮೆಯಲ್ಲಿ ನದಿಯಲ್ಲಿ ದೋಣಿ ಬಿಡುವುದರಿಂದ ಪಾಪಗಳು ತೊಳೆದುಹೋಗಿ ಅವರ ಇಚ್ಛೆಗಳು ಈಡೇರುತ್ತದೆಂದು ನಂಬಲಾಗಿದೆ.
|