ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಭಯೋತ್ಪಾದಕರ ಇ-ಮೇಲ್ ಸುಳಿವು ಲಭ್ಯ
ಲಖ್ನೋ ಬಾಂಬ್ ಸ್ಫೋಟ:ಸೂತ್ರದಾರಿ ಶಮೀಮ್‌ಗೆ ಶೋಧ
ಲಖ್ನೋ ಸರಣಿ ಬಾಂಬ್ ಸ್ಫೋಟವಾಗುವ ಕೆಲವೇ ನಿಮಿಷಗಳ ಮುನ್ನ ಪ್ರಮುಖ ಮಾದ್ಯಮಗಳಿಗೆ ಕಳುಹಿಸಲಾಗಿದ್ದ ಇ- ಮೇಲ್ ಸಂದೇಶದ ಮೂಲವನ್ನು ಪತ್ತೆ ಹಚ್ಚಿದ್ದು. ನವದೆಹಲಿಯ ಸೈಬರ್ ಕೆಫೆಯ ಮೂಲಕ ಕಳುಹಿಸಲಾಗಿದೆ. ಈ ವರದಿಯನ್ನಾಧರಿಸಿ ತನಿಖೆ ಕೈಗೆತ್ತಿಕೊಂಡ ದೆಹಲಿ ಪೊಲೀಸರು ನವದೆಹಲಿಯ ಲಕ್ಷ್ಮೀ ನಗರ ಪ್ರದೇಶದಲ್ಲಿನ ಸೈಬರ್ ಕೇಂದ್ರದ ಮೇಲೆ ದಾಳಿ ಮಾಡಿ ಸೈಬರ್ ಕೇಂದ್ರದ ಮಾಲಿಕ ಮತ್ತು ನೌಕರನನ್ನು ಬಂಧಿಸಿದ್ದಾರೆ.

ದೆಹಲಿ ಪೊಲೀಸರ ಪ್ರಕಾರ ನವಂಬರ್ 22 ರಂದು ಮಾಧ್ಯಮಗಳಿಗೆ ಕಳುಹಿಸಲಾಗಿದ್ದ ಇ -ಮೇಲ್‍‌ನ್ನು ಸೃಷ್ಟಿಸಲಾಗಿದ್ದು, ವಿಳಾಸ ಮತ್ತಿತರ ವಿವರಗಳನ್ನು ನೀಡಲಾಗಿಲ್ಲ ಎಂದು ಹೇಳಿದ್ದಾರೆ ತನಿಖಾ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

ಗುಪ್ತಚರ ಇಲಾಖೆಗಳು ಸಂಶಯಿತ ಶಮೀಮ್ ಎಂಬ ವ್ಯಕ್ತಿಯ ಶೋಧದಲ್ಲಿದ್ದು, ಆತನು ಪಾಕಿಸ್ತಾನದಲ್ಲಿನ ಉಗ್ರರಿಂದ ತರಬೇತಿ ಪಡೆದಿದ್ದಾನೆ ಎಂದು ನಂಬಲಾಗಿದೆ. ಇದೇ ಶಮೀಮ್, ಕಳೆದ ವರ್ಷ ಸಂಕಟ್ ಮೋಚನ್ ಮತ್ತು ಕ್ಯಾಂಟನ್ಮೊಂಟ್ ಪ್ರದೇಶದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ರೂವಾರಿ ಮಹ್ಮದ್ ವಲೈಲುಲ್ಲಾನ ಆತ್ಮೀಯ ಮಿತ್ರ ಎಂದು ಪೊಲೀಸರು ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.

ವಾರಾಣಸಿ, ಫೈಜಾಬಾದ್ ಮತ್ತು ಲಖ್ನೋಗಳಲ್ಲಿ ಶುಕ್ರವಾರ ಇಳಿ ಸಂಜೆ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಬಳಸಲಾಗಿದ್ದ ಸೈಕಲ್‌‌ಗಳನ್ನು ಖರೀದಿಸಿದ್ದ ಅಂಗಡಿಗಳು ಮತ್ತು ಭಯೋತ್ಪಾದಕರು ಬಳಸಿದ ಇ-ಮೇಲ್ ಸುಳಿವನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆ ಹಚ್ಚಿದ್ದಾರೆ.

ವಾರಾಣಸಿ, ಫೈಜಾಬಾದ್ ಮತ್ತು ಲಖ್ನೋ ನಗರಗಳ ವಿವಿದ ಅಂಗಡಿಗಳಿಂದ ಸೈಕಲ್‌ಗಳನ್ನು ಖರೀದಿಸಲಾಗಿದೆ. ಈ ತ್ರಿವಳಿ ನಗರಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 14 ಜನರು ಸಾವಿಗೀಡಾಗಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಬಾಂಬ್ ಸ್ಫೋಟಕ್ಕೆ ಬಳಸಲಾಗಿರುವ ಸೈಕಲ್‌ಗಳನ್ನು ಖರೀದಿ ಮಾಡಿದ ಅಂಗಡಿಗಳ ಮಾಲಿಕರು ನಮಗೆ ಕೆಲ ಮಹತ್ವದ ಮಾಹಿತಿಗಳನ್ನು ನೀಡಿದ್ದು, ಅದು ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಉಪಯೋಗವಾಗಲಿದೆ ಎಂದು ಪೊಲೀಸ್ ಮಹಾನಿರ್ದೇಶಕ ಅರವಿಂದ್ ಜೈನ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಒಟ್ಟು ಆರು ಸೈಕಲ್‌ಗಳನ್ನು ಸ್ಫೋಟಕ್ಕೆ ಭಯೋತ್ಪಾದಕರು ಬಳಸಿದ್ದು ಅದರಲ್ಲಿ ಫೈಜಾಬಾದ್‌ ನಗರದಲ್ಲಿ ಹೊಸ ಸೈಕಲ್ಲಿನಲ್ಲಿ ಬಾಂಬ್ ಅಳವಡಿಸಲಾಗಿತ್ತು. ಲಖ್ನೋ ನಗರದಲ್ಲಿನ ಬಾಂಬ್ ಸ್ಫೋಟಕ್ಕೆ ಹಳತಾದ ಸೈಕಲ್ ಉಪಯೋಗಿಸಲಾಗಿದೆ. ರಾಜಧಾನಿಯಲ್ಲಿ ಇನ್ನೊಂದು ಹೊಸ ಸೈಕಲ್ಲಿನಲ್ಲಿ ಬಾಂಬ್ ಅಳವಡಿಸಲಾಗಿತ್ತು ಆದರೆ ಅದು ಸ್ಫೋಟಗೊಳ್ಳಲಿಲ್ಲ.
ಮತ್ತಷ್ಟು
ಸಿಖ್ ಗುರು ಜನ್ಮದಿನ, ಕಾರ್ತಿಕ ಪೂರ್ಣಿಮೆ
ಗೋವಾ ರಾಜ್ಯಪಾಲ ಜಮೀರ್ ಹತ್ಯೆ ಯತ್ನ
ಪರಿಹಾರಕ್ಕೆ ಗ್ರಾಹಕ ವೇದಿಕೆ ಆದೇಶ
ಇಂದು ಉತ್ತರ ಪ್ರದೇಶ ಬಂದ್
ಉ.ಪ್ರ. ಸರಣಿ ಸ್ಫೋಟ ಪ್ರತೀಕಾರವೇ?
ಉಪಾಹಾರ್ ಮಾಲೀಕರಿಗೆ 2 ವರ್ಷ ಶಿಕ್ಷೆ