ಪ್ರತಿಭಟನೆ ನಡೆಸುತ್ತಿದ್ದ ಆದಿವಾಸಿಗಳು ಮತ್ತು ಸ್ಥಳೀಯ ನಿವಾಸಿಗಳ ನಡುವೆ ಗುವಾಹಟಿಯಲ್ಲಿ ಶನಿವಾರ ಭೀಕರ ಕದನ ನಡೆದು ಕನಿಷ್ಠ 15 ಜನರು ಸತ್ತಿದ್ದು, 50ಕ್ಕೂ ಹೆಚ್ಚು ಮಂದಿ ಶನಿವಾರ ಗಾಯಗೊಂಡಿದ್ದಾರೆ. ಆದಿವಾಸಿಗಳಿಗೆ ಪರಿಶಿಷ್ಟ ವರ್ಗಗಳ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಆದಿವಾಸಿಗಳು ರಾಜ್ಯ ವಿಧಾನಸಭೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತು.
ಘರ್ಷಣೆ ಸಂಭವಿಸಿದ ಬಳಿಕ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಅನಿರ್ದಿಷ್ಟ ಕರ್ಫ್ಯೂವನ್ನು ವಿಧಿಸಲಾಗಿದ್ದು, ಸೇನೆಯನ್ನು ಕರೆಸಲಾಗಿದೆ. ಹಿಂಸಾಚಾರದಲ್ಲಿ ಅನೇಕ ಅಂಗಡಿಗಳು ನಾಶವಾಗಿದ್ದು, 100ಕ್ಕೂ ಹೆಚ್ಚು ವಾಹನಗಳು ನಾಶವಾಗಿವೆ. ಸ್ಥಳೀಯ ನಿವಾಸಿಗಳು ಮತ್ತು ಆದಿವಾಸಿಗಳ ನಡುವೆ ಘರ್ಷಣೆಗೆ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಸ್ಸಾಂ ಸರ್ಕಾರ ಈ ಹಿಂಸಾಚಾರದ ಸೂತ್ರಧಾರ ಎಂದು ಆದಿವಾಸಿಗಳ ನಾಯಕ ತಿಳಿಸಿದ್ದಾನೆ. ಘಟನೆಯ ಬಳಿಕ ಗಾಯಗೊಂಡವರು, ಸತ್ತವರು ಅನಾಥರಾಗಿ ರಸ್ತೆಯಲ್ಲಿ ಬಿದ್ದಿದ್ದು ಘರ್ಷಣೆ ನಡೆದ ಸ್ಥಳದಲ್ಲಿ ಪೊಲೀಸರ ಸುಳಿವೇ ಇರಲಿಲ್ಲ ಎಂದು ವರದಿಗಳು ತಿಳಿಸಿವೆ.
|