ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತಸ್ಲೀಮಾಗೆ ಥೈಲೆಂಡ್‌ಗೆ ತೆರಳಲು ಸೂಚನೆ
PTI
ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ತಸ್ಲೀಮಾ ಅವರಿಗೆ ಆಗಸ್ಟ್‌ನಲ್ಲಿ ಥೈಲೆಂಡ್‌ಗೆ ತೆರಳುವಂತೆ ಪಶ್ಚಿಮಬಂಗಾಳ ಸರ್ಕಾರ ಸೂಚಿಸಿದೆ. ಬಾಂಗ್ಲಾದೇಶದ ಲೇಖಕಿ ಈಗ ಅಲೆಮಾರಿ ಬದುಕನ್ನು ಬದುಕಬೇಕಾಗಿದೆ. ಅವರನ್ನು ಪಶ್ಚಿಮಬಂಗಾಳ ಸರ್ಕಾರದಿಂದ ಹೊರಕ್ಕೆ ಕಳಿಸಿದಾಗ ತಸ್ಲೀಮಾ ರಾಜಸ್ತಾನದಲ್ಲಿ ತಂಗಿದರು.

ತಮ್ಮ ಲೇಖನಗಳ ಮೂಲಕ ಇಸ್ಲಾಂ ಧಾರ್ಮಿಕ ಭಾವನೆಗಳಿಗೆ ನೋವು ಉಂಟುಮಾಡಿದ್ದಾರೆಂದು ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಅವರನ್ನು ರಾಜಸ್ತಾನದಿಂದ ಕೂಡ ಕಳಿಸಲಾಯಿತು. ಅನೇಕ ಊಹಾಪೋಹಗಳ ಬಳಿಕ ಲೇಖಕಿ ಅಂತಿಮವಾಗಿ ಶುಕ್ರವಾರ ರಾತ್ರಿ ರಾಜಧಾನಿಗೆ ಕಾಲಿರಿಸಿದ್ದು ರಾಜಸ್ತಾನ ಪೊಲೀಸರು ಮತ್ತು ಗುಪ್ತಚರ ಸಿಬ್ಬಂದಿ ಅವರನ್ನು ಜತೆಗೂಡಿದ್ದಾರೆ.

ತಾವು ಜೈಪುರಕ್ಕೆ ಹೋಗುವುದಿಲ್ಲವೆಂದು ತಸ್ಲಿಮಾ ತಿಳಿಸಿದ್ದು, ಪಶ್ಚಿಮ ಬಂಗಾಳಕ್ಕೆ ತಮ್ಮನ್ನು ಕಳಿಸುವಂತೆ ರಾಜಸ್ತಾನ ಸರ್ಕಾರಕ್ಕೆ ಸೂಚಿಸಿದ್ದಾರೆ. ಪಶ್ಚಿಮಬಂಗಾಳ ಸರ್ಕಾರದ ಅಧಿಕಾರಿಗಳು ತಸ್ಲಿಮಾಗೆ ಕೋಲ್ಕತಾಗೆ ಪ್ರವೇಶ ನೀಡಲು ನಿರಾಕರಿಸಿದ್ದರಿಂದ ಅವರನ್ನು ದೆಹಲಿಗೆ ಕರೆತರಲಾಯಿತು ಎಂದು ಮೂಲಗಳು ಹೇಳಿವೆ. ಏತನ್ಮಧ್ಯೆ, ಮಾಧ್ಯಮದ ಜತೆ ಮಾತನಾಡದಂತೆ ಕೇಂದ್ರ ಸರ್ಕಾರದ ಅಧಿಕಾರಿಗಳು ತಸ್ಲೀಮಾಗೆ ಆದೇಶ ನೀಡಿದ್ದಾರೆ.
ಮತ್ತಷ್ಟು
ಆದಿವಾಸಿಗಳು, ಸ್ಥಳೀಯರ ಕದನ: 15 ಸಾವು
ಭಯೋತ್ಪಾದಕರ ಇ-ಮೇಲ್ ಸುಳಿವು ಲಭ್ಯ
ಸಿಖ್ ಗುರು ಜನ್ಮದಿನ, ಕಾರ್ತಿಕ ಪೂರ್ಣಿಮೆ
ಗೋವಾ ರಾಜ್ಯಪಾಲ ಜಮೀರ್ ಹತ್ಯೆ ಯತ್ನ
ಪರಿಹಾರಕ್ಕೆ ಗ್ರಾಹಕ ವೇದಿಕೆ ಆದೇಶ
ಇಂದು ಉತ್ತರ ಪ್ರದೇಶ ಬಂದ್