ರೈಲು ಪ್ರಯಾಣ ದರಗಳಲ್ಲಿ ಕಡಿತ ಮಾಡಿದ್ದರೂ ರೈಲ್ವೆ ಕಳೆದ ವರ್ಷ 20,000 ಕೋಟಿ ರೂ. ಲಾಭ ಗಳಿಸಿದೆ ಎಂದು ರೈಲ್ವೆ ಸಚಿವ ಲಾಲು ಪ್ರಸಾದ್ ಶನಿವಾರ ತಿಳಿಸಿದ್ದು, ಮುಂದಿನ ರೈಲ್ವೆ ಬಜೆಟ್ ಜನಸಾಮಾನ್ಯರ ಬಜೆಟ್ ಎಂದು ಹೇಳಿದ್ದಾರೆ. "ಸಂಸತ್ತು ಇನ್ನೂ ಅಧಿವೇಶನದಲ್ಲಿ ಇರುವುದರಿಂದ ಬಜೆಟ್ ಬಗ್ಗೆ ನಾನು ಏನನ್ನೂ ಹೇಳಲಾರೆ. ಆದರೆ ಅದು ಆಮ್ ಆದ್ಮಿ ಬಜೆಟ್" ಎಂದು ಭರವಸೆ ನೀಡುವುದಾಗಿ ಅವರು ಹೇಳಿದರು.
ಪೂರ್ವ ರೈಲ್ವೆಯ ಕೃಷ್ಣನಗರ-ಲಾಲ್‌ಗೋಲಾ ವಿಭಾಗದ ವಿದ್ಯುದೀಕರಣ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹೇಳಿದರು. ಪ್ರಯಾಣ ದರದಲ್ಲಿ ಇಳಿಕೆ ಮಾಡಲಾಗಿದ್ದರೂ, ತನ್ನ ವ್ಯವಹಾರದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಮೂಲಕ ರೈಲ್ವೆ 20,000 ಕೋಟಿ ರೂ. ಲಾಭ ಗಳಿಸಿದೆ ಎಂದು ಲಾಲು ತಿಳಿಸಿದರು.
ಜಾಗತೀಕರಣವು ವ್ಯವಹಾರ ವೃದ್ಧಿಗೆ ಅವಕಾಶಗಳನ್ನು ತೆರೆದಿದೆ ಎಂದು ಹೇಳಿದ ಅವರು, ರೈಲ್ವೆ ಇದಕ್ಕೆ ಸಂಬಂಧಪಟ್ಟಂತೆ ಮುಖ್ಯ ಪಾತ್ರ ವಹಿಸಬಹುದೆಂದು ಅವರು ನುಡಿದರು. 25,000 ಕೋಟಿ ರೂ.ಗಳನ್ನು ಸರಕುಸಾಗಣೆ ಕಾರಿಡಾರ್ ನಿರ್ಮಾಣಕ್ಕೆ ಮೀಸಲಿಡಲಾಗಿದ್ದು, ಅದರಿಂದ ವ್ಯವಹಾರ ವೃದ್ಧಿಗೆ ನೆರವಾಗುತ್ತದೆ ಎಂದು ಅವರು ನುಡಿದರು.
|