ಮೂರು ದಿನಗಳ ಉಗಾಂಡಾ ಭೇಟಿಯನ್ನು ಪೂರ್ಣಗೊಳಿಸಿ ಭಾರತೀಯ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಭಾನುವಾರ ಬೆಳಗ್ಗೆ ಸ್ವದೇಶಕ್ಕೆ ಆಗಮಿಸಿದರು.
ಈ ಪ್ರವಾಸದಲ್ಲಿ ಅವರು ಉಗಾಂಡಾದ ಕಂಪಾಲಾದಲ್ಲಿ ಆಯೋಜಿಸಲಾಗಿದ್ದ ಕಾಮನ್‌ವೆಲ್ತ್ ರಾಷ್ಟ್ರಗಳ ಸರಕಾರಗಳ ಮುಖ್ಯಸ್ಥರ(ಸಿಎಚ್‌ಒಜಿಎಂ) ಸಭೆಯಲ್ಲಿ ಭಾಗವಸಿದ್ದರು.
ಇಂಡಿಯಾ-ಆಸಿಯಾನ್ ಸಮ್ಮೇಳನವನ್ನ ಪೂರೈಸಿ ಸಿಂಗಪೂರ್‌ದಿಂದ ಮಂಗಳವಾರ ನವದೆಹಲಿಗೆ ಆಗಮಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು, ಕಾಮನ್‌ವೆಲ್ತ್ ನಾಯಕರೊಂದಿಗೆ ದ್ವೀಪಕ್ಷೀಯ ಮಾತುಕತೆಗೆಗಾಗಿ ಗುರುವಾರ ಉಗಾಂಡಾದ ಕಂಪಾಲಾಗೆ ತೆರಳಿದ್ದರು.
53 ಸದಸ್ಯ ರಾಷ್ಟ್ರಗಳ ಕಾಮನ್‌ವೆಲ್ತ್ ಒಕ್ಕೂಟವು ಭಾರತದ ರಾಯಭಾರ ಕಮಲೇಶ್ ಶರ್ಮಾ ಅವರನ್ನು ಒಕ್ಕೂಟದ ಪ್ರಧಾನ ಕಾರ್ಯದರ್ಶಿಯನ್ನಾಗಿ ಎರಡು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಿತು. ಶರ್ಮಾ ಅವರು ಹಾಲಿ ಡಾನ್ ಮ್ಯಾಕ್‌ನ್ನಾನ್ ಅವರಿಂದ ಮಾರ್ಚ್‌ನಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
|