ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಾಮಾನ್ಯಸ್ಥಿತಿಗೆ ಮರಳಿದ ಗುವಾಹಟಿ
ಶನಿವಾರ ಹಿಂಸೆಯಿಂದ ತತ್ತರಿಸಿದ್ದ ಗುವಾಹಟಿ ಭಾನುವಾರ ಕೊಂಚ ಪರಸ್ಥಿತಿ ಸುಧಾರಿಸಿದ್ದು, ನಿಯಂತ್ರಣದಲ್ಲಿದೆ ಎಂದು ವರದಿಯಾಗಿದೆ.

ಓರ್ವ ವ್ಯಕ್ತಿ ಸಾವು ಮತ್ತು 240 ಜನರ ಗಾಯಕ್ಕೆ ಕಾರಣವಾಗಿರುವ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಅನಿರ್ದಿಷ್ಠಾವಧಿಯವರೆಗೆ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ.

ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕಾಗಿ ಸೇನೆಯನ್ನು ಕರೆಯಿಸಿಕೊಳ್ಳಲಾಗಿದ್ದು, ಸಾವಿರಾರು ಆದಿವಾಸಿ ವಿದ್ಯಾರ್ಥಿಗಳು ನಗರದ ಹಲವು ಅಂಗಡಿಗಳನ್ನು ಧ್ವಂಸಗೊಳಿಸಿದ್ದು, ಬಸ್ಸ್ ಸೇರಿದಂತೆ ಅನೇಕ ವಾಹನಗಳಿಗೆ ಬೆಂಕಿಯಿಟ್ಟಿದ್ದಾರೆ.

ಆದಿವಾಸಿ ವಿದ್ಯಾರ್ಥಿ ಒಕ್ಕೂಟವು ಪರಿಷ್ಟಟ ಪಂಗಡಕ್ಕಾಗಿ ಪ್ರತಿಭಟನಾ ರಾಲಿಯನ್ನು ಬೆಲ್ಟೋಲಾದಲ್ಲಿ ಹಮ್ಮಿಕೊಂಡಿತ್ತು. ಈ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಬಿಲ್ಲು-ಬಾಣ ಮತ್ತು ಲಾಠಿಗಳನ್ನು ಹಿಡಿದುಕೊಂಡು ಪ್ರತಿಭಟಿಸುತ್ತಿದ್ದರು.

ಶಾಂತಿಯನ್ನು ಕಾಪಾಡುವಂತೆ ರಾಜ್ಯದ ಜನತೆಯಲ್ಲಿ ಅಸ್ಸಾಮ್ ಮುಖ್ಯಮಂತ್ರಿ ತರುಣ್ ಗೊಗಯಿ ಅವರು ಮನವಿ ಮಾಡಿಕೊಂಡಿದ್ದಾರೆ.

ಗುವಾಹಟಿಯಲ್ಲಿ ಪ್ರತಿಭಟನಾ ರಾಲಿ ನಡೆಸಲು ಎಎಎಸ್ಎಗೆ ಅವಕಾಶ ನೀಡಲಾಗಿಲ್ಲ. ಈ ವಿಷಯವನ್ನು ಅಸ್ಸಾಮ್ ಸರಕಾರ ಸ್ಪಷ್ಟಪಡಿಸಿದೆ.
ಮತ್ತಷ್ಟು
ಭಾರತಕ್ಕೆ ಮರಳಿದ ಪ್ರಧಾನಿ ಸಿಂಗ್
ಜನಸಾಮಾನ್ಯರ ರೈಲ್ವೆ ಬಜೆಟ್: ಲಾಲು
ತಸ್ಲೀಮಾಗೆ ಥೈಲೆಂಡ್‌ಗೆ ತೆರಳಲು ಸೂಚನೆ
ಆದಿವಾಸಿಗಳು, ಸ್ಥಳೀಯರ ಕದನ: 15 ಸಾವು
ಭಯೋತ್ಪಾದಕರ ಇ-ಮೇಲ್ ಸುಳಿವು ಲಭ್ಯ
ಸಿಖ್ ಗುರು ಜನ್ಮದಿನ, ಕಾರ್ತಿಕ ಪೂರ್ಣಿಮೆ