ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕೊಲ್ಕತ್ತಾ ನನ್ನ ಹೃದಯ: ತಸ್ಲೀಮ್
ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿ ರಾಜಧಾನಿ ದೇಹಲಿಯಲ್ಲಿ ಪ್ರಸ್ತುತ ನೆಲೆಯೂರಿರುವ ವಿವಾದಾತ್ಮಕ ಬರಹಗಾರ್ತಿ ತಸ್ಲೀಮ ನಸ್ರೀನ್ ಅವರು ಕೊಂಚ ನಿಟ್ಟುಸಿರು ಬಿಡುತ್ತಿರಬಹುದು. ಆದರೆ ಅವರ ರಾಜಧಾನಿಯಲ್ಲಿನ ಜೀವನವು ಕಾನೂನು ವ್ಯವಸ್ಥೆ ಪಾಲನೆಗೆ ಬಾರಿ ಹೊಡೆತವನ್ನು ನೀಡಲಿದೆ ಕೇಂದ್ರವು ಕಳವಳ ವ್ಯಕ್ತಪಡಿಸಿದೆ.

ಶುಕ್ರವಾರ ಸಾಯಂಕಾಲ ದೆಹಲಿಗೆ ಬಂದಿಳಿದ ನಂತರದಲ್ಲಿ ಅವರೊಡನೆ ಕೇಂದ್ರ ಪ್ರತಿನಿಧಿಗಳು ಮಾತಕತೆ ನಡೆಸಿದ್ದಾರೆ. ಅಲ್ಲದೆ ತಮ್ಮ ವಿಸಾ ಅಂತಿಮಗೊಳ್ಳುವ ಫೆಬ್ರವರಿ 17ರವರೆಗೆ ಅವರು ದೇಶದಲ್ಲಿ ನೆಲೆಸುವ ತಮ್ಮ ನಿರ್ಧಾರವನ್ನು ಮರುವಿಚಾರಣೆ ಮಾಡಿದರೆ ಎಂಬ ಪ್ರಶ್ನೆಯನ್ನು ಕೇಂದ್ರ ಪ್ರತಿನಿಧಿಗಳು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಪ್ರತಿನಿಧಿಗಳ ಮಾತನ್ನು ತಿರಸ್ಕರಿಸಿದ ತಸ್ಲೀಮ್, ತನ್ನ 'ಹೃದಯವು ನೆಲೆಯೂರಿರುವ' ಕೊಲ್ಕತ್ತಾಗೆ ಮರಳುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ತಸ್ಲೀನ ಅವರು ಭಾರತ ಬಿಟ್ಟು ಸಾಗಲು ಮುಸ್ಲಿಂ ಸಮೂಹವು ಬುಧವಾರದಂದು ಪ್ರತಿಭಟನೆ ನಡೆಸಿತ್ತು. ಇದೇ ಕಾರಣವಾಗಿ ಅವರು ಕೊಲ್ಕತ್ತಾ ಬಿಟ್ಟು ದೆಹಲಿಗೆ ಸಾಗಿದ್ದರು.
ಮತ್ತಷ್ಟು
ಸಾಮಾನ್ಯಸ್ಥಿತಿಗೆ ಮರಳಿದ ಗುವಾಹಟಿ
ಭಾರತಕ್ಕೆ ಮರಳಿದ ಪ್ರಧಾನಿ ಸಿಂಗ್
ಜನಸಾಮಾನ್ಯರ ರೈಲ್ವೆ ಬಜೆಟ್: ಲಾಲು
ತಸ್ಲೀಮಾಗೆ ಥೈಲೆಂಡ್‌ಗೆ ತೆರಳಲು ಸೂಚನೆ
ಆದಿವಾಸಿಗಳು, ಸ್ಥಳೀಯರ ಕದನ: 15 ಸಾವು
ಭಯೋತ್ಪಾದಕರ ಇ-ಮೇಲ್ ಸುಳಿವು ಲಭ್ಯ