ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತಸ್ಲೀಮಾಗೆ ಆಶ್ರಯ ನೀಡಿ: ಭಾಜಪ
ಬಾಂಗ್ಲಾದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್‌‌ಗೆ ರಾಜಕೀಯ ನಿರಾಶ್ರಿತೆ ಸ್ಥಾನಮಾನ ನೀಡುವಂತೆ ಒತ್ತಾಯಿಸಿರುವ ಬಿಜೆಪಿ, ತಸ್ಲೀಮಾ ವಿಚಾರದಲ್ಲಿ ಮೌನವಹಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಒಂದೆಡೆ ಬಾಂಗ್ಲಾದಿಂದ ಲಕ್ಷಾಂತರ ಅಕ್ರಮ ವಲಸಿಗರಿಗೆ ಮುಕ್ತ ಪ್ರವೇಶ ಕಲ್ಪಿಸಿರುವ ಪಶ್ಚಿಮಬಂಗಾಲ ಹಾಗೂ ಕೇಂದ್ರ ಸರಕಾರ, ಇನ್ನೊಂದೆಡೆ ವೋಟ್ ಬ್ಯಾಂಕ್ ರಾಜಕಾರಣದ ಹೆಸರಲ್ಲಿ ಬಾಂಗ್ಲಾದ ಲೇಖಕಿ ತಸ್ಲೀಮಾಗೆ ಆಶ್ರಯ ನೀಡಲು ಹಿಂದೇಟು ಹಾಕುವ ಮೂಲಕ ರಾಜಕೀಯ ದಿವಾಳಿತನವನ್ನು ಪ್ರದರ್ಶಿಸುತ್ತಿದೆ ಎಂದು ಟೀಕಿಸಿದೆ.

ರಾಜಕೀಯ ನಿರಾಶ್ರಿತೆಯಾಗಿರುವ ತಸ್ಲೀಮಾಗೆ ಸಂಪೂರ್ಣ ರಕ್ಷಣೆ ಒದಗಿಸುವ ಮೂಲಕ ಭಾರತದಲ್ಲಿ ನೆಲೆಸಲು ಅವಕಾಶ ಕಲ್ಪಿಸಬೇಕು. ಟಿಬೇಟಿಯನ್ ನಿರಾಶ್ರಿತರಿಗೆ ನೀಡಲಾಗಿರುವ ಹಕ್ಕುಗಳನ್ನು ಆಕೆಗೂ ಒದಗಿಸಬೇಕು ಎಂದು ಒತ್ತಾಯಿಸಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯವೊಂದನ್ನು ಬಿಜೆಪಿ ಅಂಗೀಕರಿಸಿದೆ.

ಇದೇ ವೇಳೆ, ಭಯೋತ್ಪಾದಕರ ವಿರುದ್ಧ ಕೇಂದ್ರದ ಯುಪಿಎ ಸರಕಾರ ತೋರುತ್ತಿರುವ ಮೆದು ಧೋರಣೆಯನ್ನು ಖಂಡಿಸಿ ರಾಜಕೀಯ ನಿಲುವಳಿಯೊಂದನ್ನು ಪಕ್ಷ ಅಂಗೀಕರಿಸಿತು. ವೋಟ್ ಬ್ಯಾಂಕ್ ರಾಜಕಾರಣದ ಹೆಸರಲ್ಲಿ, ಭಯೋತ್ಪಾದಕ ಚಟುವಟಿಕೆಗಳನ್ನು ನಿರ್ಲಕ್ಷಿಸುವ ಸರಕಾರದ ಕ್ರಮ ದೇಶದ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಪಕ್ಷ ಹೇಳಿದೆ.
ಮತ್ತಷ್ಟು
ನಗರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹಣ
ಕೊಲ್ಕತ್ತಾ ನನ್ನ ಹೃದಯ: ತಸ್ಲೀಮ್
ಸಾಮಾನ್ಯಸ್ಥಿತಿಗೆ ಮರಳಿದ ಗುವಾಹಟಿ
ಭಾರತಕ್ಕೆ ಮರಳಿದ ಪ್ರಧಾನಿ ಸಿಂಗ್
ಜನಸಾಮಾನ್ಯರ ರೈಲ್ವೆ ಬಜೆಟ್: ಲಾಲು
ತಸ್ಲೀಮಾಗೆ ಥೈಲೆಂಡ್‌ಗೆ ತೆರಳಲು ಸೂಚನೆ