ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ದೆಹಲಿ ಸುತ್ತಮುತ್ತ ಕಂಪಿಸಿದ ಭೂಮಿ
ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಾದ ಹರ್ಯಾಣ ಮತ್ತು ಉತ್ತರ ಪ್ರದೇಶದ ಕೆಲವೆಡೆ ಇಂದು ನಸುಕಿನ ಜಾವ ಭೂಮಿ ಕಂಪಿಸಿದ್ದು, ಜನರು ನಿದ್ದೆಯಿಂದೆದ್ದು ಆತಂಕದಿಂದ ಮನೆಗಳಿಂದ ಹೊರಗೋಡಿದರು.

ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.3 ಇದ್ದರೂ, ಅದರ ಕೇಂದ್ರ ಬಿಂದು ದೆಹಲಿ-ಹರ್ಯಾಣ ಗಡಿಭಾಗವೇ ಆಗಿದ್ದುದರಿಂದ ಅದು ಪ್ರಬಲವಾಗಿ ಕಂಪಿಸಿದಂತಹ ಅನುಭವ ನೀಡಿತು. ಭೂಗರ್ಭ ಇಲಾಖೆ ಇದನ್ನು ಕಡಿಮೆ ತೀವ್ರತೆಯ ಕಂಪನ ಎಂದು ತಿಳಿಸಿದೆ.

ದೆಹಲಿ ಹಾಗೂ ಉತ್ತರ ಪ್ರದೇಶದ ನೋಯಿಡಾ ಮತ್ತು ಹರ್ಯಾಣದ ಫರೀದಾಬಾದ್ ಹಾಗೂ ಗುರ್‌ಗಾಂವ್‌ಗಳಲ್ಲಿ ಭೂಕಂಪದ ಅನುಭವವಾಗಿದೆ. ಬೆಳಗಿನ ಜಾವ 4.42ರ ಸುಮಾರಿಗೆ ಇದು ಸಂಭವಿಸಿದ್ದು, ಜನತೆಗೆ ನಿದ್ದೆಯಲ್ಲೇ ಅಲುಗಾಡಿಸಿದ ಅನುಭವವಾಯಿತು. ಯಾವುದೇ ಹಾನಿಯಾದ ಕುರಿತು ಇದುವರೆಗೆ ವರದಿಯಾಗಿಲ್ಲ.
ಮತ್ತಷ್ಟು
ತಸ್ಲೀಮಾಗೆ ಆಶ್ರಯ ನೀಡಿ: ಭಾಜಪ
ನಗರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹಣ
ಕೊಲ್ಕತ್ತಾ ನನ್ನ ಹೃದಯ: ತಸ್ಲೀಮ್
ಸಾಮಾನ್ಯಸ್ಥಿತಿಗೆ ಮರಳಿದ ಗುವಾಹಟಿ
ಭಾರತಕ್ಕೆ ಮರಳಿದ ಪ್ರಧಾನಿ ಸಿಂಗ್
ಜನಸಾಮಾನ್ಯರ ರೈಲ್ವೆ ಬಜೆಟ್: ಲಾಲು