ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬಾಂಬ್ ಸ್ಫೋಟ:ಮಣಿಪುರ ಉಪಸ್ಪೀಕರ್ ಪಾರು
ಪೂರ್ವ ಇಂಫಾಲದಲ್ಲಿ ಉಗ್ರಗಾಮಿಗಳು ಶಕ್ತಿಶಾಲಿ ಬಾಂಬ್ ಸ್ಫೋಟಿಸಿದಾಗ ಮಣಿಪುರ ಉಪಸ್ಪೀಕರ್ ಎಂ. ಶ್ಯಾಂಕುಮಾರ್ ಯಾವುದೇ ಅಪಾಯವಾಗದೇ ಪಾರಾಗಿದ್ದಾರೆ.

ಆದರೆ ಮೀಸಲು ಪಡೆಯ ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಕುಮಾರ್ ಅವರ ಚಾಲಕನಿಗೆ ಬಾಂಬ್ ತುಣುಕುಗಳು ಸಿಡಿದು ಗಾಯವಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಕುಮಾರ್ ಅವರು ಇಲ್ಲಿಗೆ 25 ಕಿಮೀ ದೂರದ ಓಕ್ಶು ಬಳಿ ಹಾದುಹೋಗುವಾಗ ರಸ್ತೆಯಲ್ಲಿ ಇಟ್ಟಿದ್ದ ಬಾಂಬ್ ಸ್ಫೋಟಿಸಿತು.

ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ತಮ್ಮ ಕ್ಷೇತ್ರದ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಭಾರೀ ಪೊಲೀಸ್ ಪಡೆ ಆ ಸ್ಥಳಕ್ಕೆ ಧಾವಿಸಿದೆ.
ಮತ್ತಷ್ಟು
ದೆಹಲಿ ಸುತ್ತಮುತ್ತ ಕಂಪಿಸಿದ ಭೂಮಿ
ತಸ್ಲೀಮಾಗೆ ಆಶ್ರಯ ನೀಡಿ: ಭಾಜಪ
ನಗರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹಣ
ಕೊಲ್ಕತ್ತಾ ನನ್ನ ಹೃದಯ: ತಸ್ಲೀಮ್
ಸಾಮಾನ್ಯಸ್ಥಿತಿಗೆ ಮರಳಿದ ಗುವಾಹಟಿ
ಭಾರತಕ್ಕೆ ಮರಳಿದ ಪ್ರಧಾನಿ ಸಿಂಗ್