ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಸ್ಸಾಂ ಬಂದ್: ಬಾಲಕನ ಹತ್ಯೆ
ಅಖಿಲ ಅಸ್ಸಾಂ ಆದಿವಾಸಿ ವಿದ್ಯಾರ್ಥಿ ಸಂಘಟನೆ ನೀಡಿದ 36 ಗಂಟೆಗಳ ಬಂದ್ ಕರೆ ಸೋಮವಾರ ಹಿಂಸಾತ್ಮಕ ಸ್ವರೂಪ ತಾಳಿ ಆದಿವಾಸಿ ಕಾರ್ಯಕರ್ತರು ನಸುಕಿನಲ್ಲಿ ಅಪ್ರಾಪ್ತ ವಯಸ್ಕ ಬಾಲಕನೊಬ್ಬನನ್ನು ಹತ್ಯೆ ಮಾಡಿದ್ದು, ವಾಹನವೊಂದಕ್ಕೆ ಅಗ್ನಿಸ್ಪರ್ಶ ಮಾಡಿದ್ದಾರೆ. ಕೋಕ್ರಾಜರ್ ನಗರದಲ್ಲಿ ಮುಂಜಾನೆ 4 ಗಂಟೆಯ ಹೊತ್ತಿಗೆ ಸಂತೋಷ ಪ್ರಸಾದ್ ಎಂದು ಗುರುತಿಸಲಾದ ಬಾಲಕನನ್ನು ಮನೆಯಿಂದ ಹೊರಗೆ ಕರೆದು ಹತ್ಯೆ ಮಾಡಲಾಗಿದೆ ಎಂದು ಕೋಕ್ರಜಾರ್ ಜಿಲ್ಲೆಯಲ್ಲಿ ಅಧಿಕೃತ ಮೂಲಗಳು ಹೇಳಿವೆ.

ಅದಾದ ಅರ್ಧ ಗಂಟೆಯಲ್ಲೇ ಅಮ್ಗುರಿ ಸೇತುವೆಯ ಬಳಿ ಖಾಸಗಿ ವಾಹನವೊಂದಕ್ಕೆ ಬೆಂಕಿ ಹಚ್ಚಲಾಗಿದೆಯೆಂದು ಮೂಲಗಳು ಹೇಳಿವೆ. ಬೆಳಿಗ್ಗೆ 5 ಗಂಟೆಗೆ ಆರಂಭವಾದ ಬಂದ್, ಗುವಾಹಟಿಯಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ.

ಆದಿವಾಸಿ ಪ್ರತಿಭಟನೆಕಾರರು ಮತ್ತು ಸಾರ್ವಜನಿಕರ ನಡುವೆ ಶನಿವಾರ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಸತ್ತಿದ್ದು, 300ರಷ್ಟು ಮಂದಿ ಗಾಯಗೊಂಡಿದ್ದರು. ಕೋಕ್ರಾಜರ್ ನಗರದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ದೂರ ಪ್ರಯಾಣದ ಬಸ್ಸುಗಳು ಮತ್ತಿತರ ವಾಹನಗಳು 31-ಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಬೆಂಗಾವಲಿನಲ್ಲಿ ಸಂಚರಿಸುತ್ತಿವೆ ಎಂದು ಮೂಲಗಳು ಹೇಳಿವೆ.
ಮತ್ತಷ್ಟು
ಶಾಂತಿ ಸಮಾವೇಶಕ್ಕೆ ಕಪಿಲ್ ಸಿಬಾಲ್
ದೆಹಲಿ ಸುತ್ತಮುತ್ತ ಕಂಪಿಸಿದ ಭೂಮಿ
ತಸ್ಲೀಮಾಗೆ ಆಶ್ರಯ ನೀಡಿ: ಭಾಜಪ
ನಗರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹಣ
ಕೊಲ್ಕತ್ತಾ ನನ್ನ ಹೃದಯ: ತಸ್ಲೀಮ್
ಸಾಮಾನ್ಯಸ್ಥಿತಿಗೆ ಮರಳಿದ ಗುವಾಹಟಿ