ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಹಿ.ಪ್ರ.:ಧುಮಾಲ್ ಮುಖ್ಯಮಂತ್ರಿ ಅಭ್ಯರ್ಥಿ
ಮುಖ್ಯಮಂತ್ರಿ ಕುರ್ಚಿಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ರಾಜ್ಯ ಘಟಕದಲ್ಲಿ ಸ್ಫೋಟಿಸಿದ ಅತೃಪ್ತಿಯನ್ನು ಶಮನಮಾಡುವ ಪ್ರಯತ್ನವಾಗಿ, ಬಿಜೆಪಿ ಸೋಮವಾರ ರಾಜ್ಯದ ಚುನಾವಣೆಯಲ್ಲಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದೆ. ಧುಮಾಲ್ 1998ರಿಂದ 2003ರ ನಡುವೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.

2007ರಲ್ಲಿ ಲೋಕಸಭೆಯ ಮರುಚುನಾವಣೆಯಲ್ಲಿ ಧುಮಾಲ್ ಜಯಗಳಿಸುವ ಮುನ್ನ ಅವರು ಪ್ರತಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಪಕ್ಷವು ತನ್ನ ಚುನಾವಣೆ ಪ್ರಣಾಳಿಕೆಯನ್ನು ಈ ವಾರ ಬಿಡುಗಡೆ ಮಾಡಲಿದೆ. ಡಿ.5ರಂದು ನಡೆಯುವ ಎರಡನೇ ಹಂತದ ಚುನಾವಣೆಗೆ ಪ್ರಚಾರಕ್ಕೆ ಚಾಲನೆ ನೀಡಲು ಪಕ್ಷದ ಐವರು ಉನ್ನತ ನಾಯಕರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಡಿ.5ರಂದು ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್ ಸೋಲಾನ್‌ನಲ್ಲಿ ನಡೆಯುವ ಚುನಾವಣೆ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಡ್ವಾಣಿ ಕುಲ್ಲು ಜಿಲ್ಲೆಯ ರಾಲಿಯಲ್ಲಿ ಭಾಷಣ ಮಾಡಲಿದ್ದು, ಸುಷ್ಮಾ ಸ್ವರಾಜ್ ಧರ್ಮಶಾಲಾದಲ್ಲಿ, ಮುರಳಿ ಮನೋಹರ ಜೋಷಿ ಶಿಮ್ಲಾ ಜಿಲ್ಲೆಯ ಚೌಪಾಲಾದಲ್ಲಿ ಮತ್ತು ವೆಂಕಯ್ಯ ನಾಯ್ಡು ಹಮೀರ್‌ಪುರದ ಚುನಾವಣೆ ರಾಲಿಯಲ್ಲಿ ಮಾತನಾಡಲಿದ್ದಾರೆ.
ಮತ್ತಷ್ಟು
ಅಸ್ಸಾಂ ಬಂದ್: ಬಾಲಕನ ಹತ್ಯೆ
ಶಾಂತಿ ಸಮಾವೇಶಕ್ಕೆ ಕಪಿಲ್ ಸಿಬಾಲ್
ದೆಹಲಿ ಸುತ್ತಮುತ್ತ ಕಂಪಿಸಿದ ಭೂಮಿ
ತಸ್ಲೀಮಾಗೆ ಆಶ್ರಯ ನೀಡಿ: ಭಾಜಪ
ನಗರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹಣ
ಕೊಲ್ಕತ್ತಾ ನನ್ನ ಹೃದಯ: ತಸ್ಲೀಮ್