ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಸ್ಸಾಂ: ಆದಿವಾಸಿ ಮಹಿಳೆಯ ವಿವಸ್ತ್ರ
ಅಸ್ಸಾಂನಲ್ಲಿ ಆದಿವಾಸಿಗಳು ಮತ್ತು ಅವರಿಗೆ ಬೆಂಬಲಿತ ಆದಿವಾಸಿ ವಿದ್ಯಾರ್ಥಿಗಳ ಸಂಘದ ಪ್ರತಿಭಟನೆ ಮಂಗಳವಾರ ಹಿಂಸಾಸ್ವರೂಪಕ್ಕೆ ತಿರುಗಿ ಸ್ಥಳೀಯರು ಆದಿವಾಸಿಗಳನ್ನು ನಿರ್ದಯವಾಗಿ ಥಳಿಸಿದ್ದರಿಂದ ಒಬ್ಬರು ಸತ್ತು 250 ಮಂದಿ ಗಾಯಗೊಂಡಿದ್ದಾರೆ. ಆದಿವಾಸಿ ವಿದ್ಯಾರ್ಥಿಗಳಿಗೆ ಥಳಿಸಿದ್ದಲ್ಲದೇ ಗುವಾಹಟಿಯ ನಿವಾಸಿಗಳು ಮಹಿಳಾ ಪ್ರತಿಭಟನೆಕಾರರನ್ನು ವಿವಸ್ತ್ರಗೊಳಿಸಿ ಅವರನ್ನು ಥಳಿಸಿದ ಅಮಾನವೀಯ ಘಟನೆಗಳು ನಡೆದಿವೆ.

ಶನಿವಾರ ನಡೆದ ಘರ್ಷಣೆಗಳಲ್ಲಿ ರತಿಲ್ ಬರ್ಮನ್ ಎಂದು ಗುರುತಿಸಲಾದ ಸ್ಥಳೀಯ ಅಸ್ಸಾಮಿ ವ್ಯಾಪಾರಿಯು ಮಹಿಳೆಯೊಬ್ಬಳನ್ನು ವಿವಸ್ತ್ರಗೊಳಿಸಿದ ಬಳಿಕ ಆಕೆಯನ್ನು ಹಿಂಸಿಸಿದ ದೃಶ್ಯ ಕಂಡುಬಂತು.

ಈ ಘಟನೆ ಅತ್ಯಂತ ಖಂಡನೀಯವಾಗಿದ್ದು, ರಾಜ್ಯ ಮಾನವ ಹಕ್ಕುಗಳ ಆಯೋಗ ತನಿಖೆ ನಡೆಸಲಿದೆ. ಇಂತಹ ಅಮಾನವೀಯ ಘಟನೆ ಇದೇ ಮೊದಲ ಬಾರಿ ನಡೆದಿದ್ದು, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಸ್ಸಾಂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮೃದುಲಾ ಸಹಾರಿಯಾ ಹೇಳಿದ್ದಾರೆ. ಬರ್ಮನ್ ಮತ್ತು ಇನ್ನೂ ಇಬ್ಬರನ್ನು ಬಂಧಿಸಲಾದಗಿದ್ದು, ಮುಖ್ಯಮಂತ್ರಿ ತರುಣ್ ಗೊಗೊಯ್ ಸಂತ್ರಸ್ತ ಮಹಿಳೆಗೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಮತ್ತಷ್ಟು
ಉ.ಪ್ರ.ದಲ್ಲಿ ಸ್ಫೋಟಕ್ಕೆ ಶಿವರಾಜ್ ಪಾಟೀಲ್ ಖಂಡನೆ
ಹಿ.ಪ್ರ.:ಧುಮಾಲ್ ಮುಖ್ಯಮಂತ್ರಿ ಅಭ್ಯರ್ಥಿ
ಅಸ್ಸಾಂ ಬಂದ್: ಬಾಲಕನ ಹತ್ಯೆ
ಬಾಂಬ್ ಸ್ಫೋಟ:ಮಣಿಪುರ ಉಪಸ್ಪೀಕರ್ ಪಾರು
ದೆಹಲಿ ಸುತ್ತಮುತ್ತ ಕಂಪಿಸಿದ ಭೂಮಿ
ತಸ್ಲೀಮಾಗೆ ಆಶ್ರಯ ನೀಡಿ: ಭಾಜಪ