ದೇಶದಲ್ಲಿನ ಕೋಮು ಸೌಹಾರ್ಧವನ್ನು ಭಯೋತ್ಪಾದಕರು ಹಾಳುಗೆಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿರುವ ಕೇಂದ್ರ ಸರಕಾರ, ಭಯೋತ್ಪಾದನೆ ನಿಗ್ರಹಕ್ಕೆ ಪೋಟಾ ಕಾನೂನಿಗಿಂತ ನಾಗರಿಕರ, ಎಲ್ಲ ರಾಜಕೀಯ ಪಕ್ಷಗಳ, ಮಾಧ್ಯಮಗಳ ಸಹಕಾರ ಸಾಕು ಎಂದು ಅನಿಸಿಕೆ ವ್ಯಕ್ತಪಡಿಸಿದೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಉತ್ತರಪ್ರದೇಶದಲ್ಲಿ ಸಂಭವಿಸಿದ ಬಾಂಬ್ ಸ್ಪೋಟವನ್ನು ಖಂಡಿಸಿದ ಕೇಂದ್ರ ಗೃಹಖಾತೆ ಸಚಿವ ಶಿವರಾಜ್ ಪಾಟೀಲ್ ಮತ್ತು ರಾಜ್ಯ ಗೃಹಖಾತೆ ಸಚಿವ ಪ್ರಕಾಶ್ ಜೈಸ್ವಾಲ್ ಅವರು ಗುಪ್ತಚರ ಇಲಾಖೆ ಮತ್ತು ಸುರಕ್ಷಾ ಪಡೆಗಳು ಭಯೋತ್ಪಾದಕರ ಚಟುವಟಿಕೆಗಳನ್ನು ಹತ್ತಿಕ್ಕುವುದಕ್ಕೆ ಕ್ರಮತೆಗೆದುಕೊಳ್ಳುತ್ತಿವೆ ಎಂದು ಹೇಳಿದರು
ಪೋಟಾ ಜಾರಿಗೆ ತರುವಂತೆ ಭಾರತೀಯ ಜನತಾ ಪಕ್ಷ ಮಾಡಿರುವ ಬೇಡಿಕೆಯನ್ನು ಸದನದಲ್ಲಿ ತಳ್ಳಿಹಾಕಿದ ಸಚಿವರು, ರಾಜ್ಯ ಸರಕಾರದ ವಿಶೇಷ ತನಿಖಾ ಪಡೆಗಳಿಗೆ ಇಂತಹ ಪ್ರಕರಣಗಳನ್ನು ವಹಿಸಿಕೊಡಲಾಗುತ್ತಿರುವುದರಿಂದ ಪೋಟಾ ಜಾರಿಯ ಅವಶ್ಯಕತೆ ಇಲ್ಲ ಎಂಬುದು ಸರಕಾರದ ನಿಲುವಾಗಿದೆ ಎಂದು ಹೇಳಿದ್ದಾರೆ.
|