ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಗುಜರಾತಿನಲ್ಲಿ ಪ್ರಚಾರಕ್ಕೆ ಚಾಲನೆ
ND
ತನ್ನ ಭದ್ರಕೋಟೆಯಾದ ಗುಜರಾತಿನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಸಂಕಲ್ಪಿಸಿರುವ ಬಿಜೆಪಿ ಅತ್ಯಂತ ಬಿರುಸಿನ ಪ್ರಚಾರಕ್ಕೆ ಮಂಗಳವಾರ ಚಾಲನೆ ನೀಡಿದೆ. ಅದರ ಮೇಲುಸ್ತರದ ನಾಯಕರು ಚುನಾವಣೆ ರಾಲಿಗಳು ಮತ್ತು ಸಭೆಗಳ ಸರಣಿಗಳನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಕ್ಕೆ ಲಗ್ಗೆ ಹಾಕಿದ್ದಾರೆ.

ಆದರೆ ಪಕ್ಷದ ಹಿರಿಯ ಧುರೀಣ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಅವರ ವರ್ಚಸ್ವಿ ಆಕರ್ಷಣೆಯನ್ನು ವೈಭವದ ಪ್ರಚಾರ ಉದ್ಘಾಟನೆ ಕಳೆದುಕೊಳ್ಳಲಿದೆ. ಬಿಜೆಪಿ ಪ್ರಚಾರಕ್ಕೆ ಸುಮಾರು 87 ನಾಯಕರು ಅಡಿಪಾಯ ಹಾಕಿ ನ.27ರಂದು ಒಂದೇ ದಿನದಲ್ಲಿ ರಾಜ್ಯಾದ್ಯಂತ 180 ಪ್ರಚಾರ ಸಭೆಗಳನ್ನು ನಡೆಸುವ ಮೂಲಕ ಚುನಾವಣೆ ಪ್ರಚಾರಕ್ಕೆ ಕಳೆಮೂಡಿಸಿದ್ದಾರೆ.

ಜೀತೇಗಾ ಗುಜರಾತ್ ಘೋಷಣೆಯೊಂದಿಗೆ ಮೋದಿ ಮಂತ್ರವನ್ನು ಉಚ್ಚರಿಸುತ್ತಿರುವ ಬಿಜೆಪಿ ಮೋದಿಯನ್ನು ವಿಕಾಸ ಪುರುಷ ಎಂಬಂತೆ ಬಿಂಬಿಸಿದೆ. ಅಧಿಕಾರಸ್ಥ ವಿರೋಧಿ ಭಾವನೆಯನ್ನು ತೊಡೆದುಹಾಕುವ ಪ್ರಯತ್ನವಾಗಿ ರಾಜ್ಯದ ಸ್ವಾಭಾವಿಕ ನಾಯಕ ಎಂದು ಮೋದಿ ಅವರನ್ನು ವೈಭವೀಕರಿಸಲಾಗುತ್ತಿದೆ.

ಹಿರಿಯ ನಾಯಕರಾದ ಆಡ್ವಾಣಿ, ರಾಜನಾಥ್ ಸಿಂಗ್, ಮುರಳಿ ಮನೋಹರ ಜೋಷಿ, ವೆಂಕಯ್ಯ ನಾಯ್ಡು, ಜಸ್ವಂತ್ ಸಿಂಗ್, ಯಶವಂತ ಸಿನ್ಹಾ. ಸುಷ್ಮಾ ಸ್ವರಾಜ್ ಮುಂತಾದ ಧುರೀಣರಲ್ಲದೇ ಬಿಜೆಪಿ ಆಳ್ವಿಕೆಯ ಮುಖ್ಯಮಂತ್ರಿಗಳು ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಾಲಿವುಡ್ ತಾರೆಯರಾದ ಹೇಮಾ ಮಾಲಿನಿ, ಶತ್ರುಘ್ನ ಸಿನ್ಹಾ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ಪ್ರಚಾರಕ್ಕೆ ರಂಗು ತರಲಿದ್ದಾರೆಂದು ಪಕ್ಷದ ಉಪಾಧ್ಯಕ್ಷ ಮುಕ್ತರ್ ಅಬ್ಬಾಸ್ ನಕ್ವಿ ತಿಳಿಸಿದ್ದಾರೆ.
ಮತ್ತಷ್ಟು
ಶಿರಡಿ ಸಾಯಿ ತತ್ವಗಳ ಪಾಲನೆ ಅಗತ್ಯ: ರಾಷ್ಟ್ರಪತಿ
ಕಿರಣ್ ಬೇಡಿ ಸ್ವಯಂ ನಿವೃತ್ತಿಗೆ ಅರ್ಜಿ
ಸುಪ್ರೀಂಕೋರ್ಟ್‌ನಿಂದ ಸಂಜಯ್ ದತ್‌ಗೆ ಜಾಮೀನು
ಪೋಟಾ ಬೇಡ, ನಾಗರಿಕರ ಸಹಕಾರ ಬೇಕು: ಕೇಂದ್ರ
ಅಸ್ಸಾಂ: ಆದಿವಾಸಿ ಮಹಿಳೆಯ ವಿವಸ್ತ್ರ
ಉ.ಪ್ರ.ದಲ್ಲಿ ಸ್ಫೋಟಕ್ಕೆ ಶಿವರಾಜ್ ಪಾಟೀಲ್ ಖಂಡನೆ