ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತಸ್ಲೀಮಾಗೆ ರಕ್ಷಣೆ ನೀಡಲು ಸಿದ್ಧ: ಮೋದಿ
PTI
ಯುಪಿಎ ನೇತೃತ್ವದ ಸರ್ಕಾರ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಅವರಿಗೆ ಸೂಕ್ತ ರಕ್ಷಣೆ ನೀಡಲು ಸಾಧ್ಯವಾಗದಿದ್ದರೆ ತಮ್ಮ ಸರ್ಕಾರ ತಸ್ಲೀಮಾಗೆ ರಕ್ಷಣೆ ನೀಡಲು ಸಿದ್ಧವಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ತಸ್ಲೀಮಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಲಪ್ರಯೋಗದಿಂದ ಸ್ಥಳಾಂತರಗೊಳ್ಳುತ್ತಿದ್ದು, ಪ್ರಸಕ್ತ ರಾಷ್ಟ್ರದ ರಾಜಧಾನಿಯ ಅಜ್ಞಾತ ಸ್ಥಳವೊಂದರಲ್ಲಿ ಅವರನ್ನು ಇರಿಸಲಾಗಿದೆ.

ತಸ್ಲೀಮಾ ಅವರನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಸ್ವೀಕರಿಸಿದ ಅವರು ಕೇಂದ್ರಸರ್ಕಾರ ಅವರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಅವರನ್ನು ಗುಜರಾತಿಗೆ ಕಳಿಸಲಿ. ಅವರನ್ನು ರಕ್ಷಿಸುವ ಧೈರ್ಯ ನಮಗಿದೆ ಎಂದು ಮೋದಿ ಹೇಳಿದ್ದಾರೆ. ಮೂಲಭೂತವಾದಿಗಳ ವಿರುದ್ಧ ತಸ್ಲೀಮಾ ದಿಟ್ಟೆದೆಯಿಂದ ನುಡಿದಿದ್ದಾರೆ ಎಂದು ಮೋದಿ ಬೋಟೋಡ್ ಚುನಾವಣೆ ರಾಲಿಯಲ್ಲಿ ಹೇಳಿ, ಕೇಂದ್ರ ಸರ್ಕಾರ ಅವರನ್ನು ಇನ್ನೊಂದು ರಾಷ್ಟ್ರಕ್ಕೆ ಕಳಿಸಬಹುದೆಂದು ಭೀತಿ ವ್ಯಕ್ತಪಡಿಸಿದರು.

ಬಾಂಗ್ಲಾದೇಶದಿಂದ ವಲಸೆ ತಪ್ಪಿಸಲು ವಿಫಲವಾದ ಯುಪಿಎ ಸರ್ಕಾರದ ರಾಜಕೀಯ ಮಿತ್ರಪಕ್ಷವಾದ ಎಡಪಕ್ಷಗಳು ರಾತ್ರೋರಾತ್ರಿ ಪಶ್ಚಿಮಬಂಗಾಳದಿಂದ ತಸ್ಲೀಮಾ ಅವರನ್ನು ದೂಡಿದರೆಂದು ಅವರು ಹೇಳಿದರು.ಅಲ್ಪಸಂಖ್ಯಾತ ಕೋಮಿನ ಜನರ ಪ್ರತಿಭಟನೆಯಿಂದ ಕೋಲ್ಕತಾದಿಂದ ಜೈಪುರಕ್ಕೆ ಅವರನ್ನು ಸ್ಥಳಾಂತರಿಸಿದ ಬಳಿಕ ಶುಕ್ರವಾರ ಸಂಜೆ ದೆಹಲಿಗೆ ಆಗಮಿಸಿದ್ದಾರೆ.
ಮತ್ತಷ್ಟು
ಗುಜರಾತಿನಲ್ಲಿ ಪ್ರಚಾರಕ್ಕೆ ಚಾಲನೆ
ಶಿರಡಿ ಸಾಯಿ ತತ್ವಗಳ ಪಾಲನೆ ಅಗತ್ಯ: ರಾಷ್ಟ್ರಪತಿ
ಕಿರಣ್ ಬೇಡಿ ಸ್ವಯಂ ನಿವೃತ್ತಿಗೆ ಅರ್ಜಿ
ಸುಪ್ರೀಂಕೋರ್ಟ್‌ನಿಂದ ಸಂಜಯ್ ದತ್‌ಗೆ ಜಾಮೀನು
ಪೋಟಾ ಬೇಡ, ನಾಗರಿಕರ ಸಹಕಾರ ಬೇಕು: ಕೇಂದ್ರ
ಅಸ್ಸಾಂ: ಆದಿವಾಸಿ ಮಹಿಳೆಯ ವಿವಸ್ತ್ರ