ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಆದಿವಾಸಿಗಳಿಗೆ ಪರಿಶಿಷ್ಟರ ಸ್ಥಾನಮಾನವಿಲ್ಲ
ಅಸ್ಸಾಂನಲ್ಲಿ ಹಿಂಸಾಚಾರ ಉಲ್ಬಣಿಸಿದ್ದರೂ ಕೂಡ, ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಮಂಗಳವಾರ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಬೇಕೆಂಬ ಆದಿವಾಸಿಗಳ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ತಮ್ಮ ವಿಶಿಷ್ಠ ಸ್ವರೂಪವನ್ನು ರಕ್ಷಿಸಲು ಪರಿಶಿಷ್ಟ ವರ್ಗದ ಸ್ಥಾನಮಾನ ಅವಶ್ಯಕವೆಂದು ಆದಿವಾಸಿಗಳು ಒತ್ತಾಯಿಸಿದ್ದಾರೆ.

ಆದರೆ ಆದಿವಾಸಿಗಳು ಹಿಂಸಾಚಾರಕ್ಕೆ ತಿರುಗುವ ಮೂಲಕ ತಮ್ಮ ಆದಿವಾಸಿ ಚರ್ಯೆಯನ್ನು ಕಳೆದುಕೊಂಡಿದ್ದಾರೆಂದು ಹೇಳಿದ ಪಾಟೀಲ್ ಈ ಆದಿವಾಸಿಗಳಿಗೆ ಸ್ವಂತ ರಾಜ್ಯದಲ್ಲೇ ಪರಿಶಿಷ್ಟ ವರ್ಗದ ಸ್ಥಾನಮಾನವಿಲ್ಲ ಎಂದು ನುಡಿದಿದ್ದಾರೆ. ಏತನ್ಮಧ್ಯೆ, ಅಸ್ಸಾಂನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾ ಆದಿವಾಸಿಗಳು ಸೋನಿಟ್‌ಪುರ ಜಿಲ್ಲೆಯಲ್ಲಿ ನಡೆಸಿದ ರಾಲಿಯಲ್ಲಿ ಸುಮಾರು 20,000 ಮಂದಿ ಪಾಲ್ಗೊಂಡಿದ್ದರು.

ಅಸ್ಸಾಂ ಆದಿವಾಸಿ ಸಂಘಟನೆ ಕರೆ ನೀಡಿದ್ದ ರಾಲಿಯು ಹಿಂಸಾಸ್ವರೂಪ ತಾಳಿ ಸ್ಥಳೀಯರ ಮೇಲೆ ಹಲ್ಲೆ ಮಾಡಿದ್ದರಿಂದ 11 ಜನರು ಗಾಯಗೊಂಡಿದ್ದಾರೆ. ತೇಜಪುರ ಜಿಲ್ಲೆಯಲ್ಲಿ ಜನರನ್ನು ಥಳಿಸಿದ ಆದಿವಾಸಿಗಳು ಅಂಗಡಿಗಳಲ್ಲಿ ದಾಂಧಲೆ ನಡೆಸಿದರು. ಕೋಕ್ರಾಜರ್ ಜಿಲ್ಲೆಯಲ್ಲಿ ವಾಹನಗಳು ಮತ್ತು ಬಸ್ಸಿಗೆ ಬೆಂಕಿ ಹಚ್ಚಿದರು. ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಸತ್ತಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.
ಮತ್ತಷ್ಟು
ತಸ್ಲೀಮಾಗೆ ರಕ್ಷಣೆ ನೀಡಲು ಸಿದ್ಧ: ಮೋದಿ
ಗುಜರಾತಿನಲ್ಲಿ ಪ್ರಚಾರಕ್ಕೆ ಚಾಲನೆ
ಶಿರಡಿ ಸಾಯಿ ತತ್ವಗಳ ಪಾಲನೆ ಅಗತ್ಯ: ರಾಷ್ಟ್ರಪತಿ
ಕಿರಣ್ ಬೇಡಿ ಸ್ವಯಂ ನಿವೃತ್ತಿಗೆ ಅರ್ಜಿ
ಸುಪ್ರೀಂಕೋರ್ಟ್‌ನಿಂದ ಸಂಜಯ್ ದತ್‌ಗೆ ಜಾಮೀನು
ಪೋಟಾ ಬೇಡ, ನಾಗರಿಕರ ಸಹಕಾರ ಬೇಕು: ಕೇಂದ್ರ