ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಂಸತ್ತಿನಲ್ಲಿಂದು ಅಣು ಒಪ್ಪಂದ
ಭಾರತೀಯ ಅಣು ಪ್ರಾಧಿಕಾರದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಅವರು ಭಾರತ-ಅಮೆರಿಕ ನಾಗರಿಕ ಪರಮಾಣ ಒಪ್ಪಂದಕ್ಕೆ ಸಂಬಂಧಿಸಿದಂತೆ ಐಎಇಎ ಜೊತೆ ಮಾತುಕತೆ ನಡೆಸಿದ ವಾರಗಳ ಬಳಿಕ, ಬುಧವಾರದಂದು ಲೋಕಸಭೆಯಲ್ಲಿ ಅಣು ಒಪ್ಪಂದದ ವಿಷಯ ಚರ್ಚೆಗೆ ಬರಲಿದೆ.

ಆದರೆ ಸಂಸತ್‌‌ನಲ್ಲಿ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಮಾತ್ರ ಸರಕಾರ ಅವಕಾಶ ನೀಡುತ್ತಿದ್ದು, ಒಪ್ಪಂದದ ಕುರಿತು ಮತಕ್ಕೆ ಹಾಕುವ ನಿರ್ಧಾರ ಕೈಗೊಳ್ಳುವಲ್ಲಿ ಸರಕಾರ ಹಿಂದೇಟು ಹಾಕಿದೆ. ಅಣು ಒಪ್ಪಂದದ ಚರ್ಚೆಗೆ ನಿಗದಿತ ಅವಧಿಯನ್ನು ಮೀಸಲಿರಿಸುವ ಪ್ರಯತ್ನ ಕಾಂಗ್ರೆಸ್ ನೇತೃತ್ವದ ಸರಕಾರದಿಂದ ಆಗುತ್ತಿದೆ.

ಅಲ್ಲದೇ ಪರಮಾಣು ಒಪ್ಪಂದದ ಚರ್ಚೆಗೆ 193ರ ನಿಯಮದನ್ವಯ ಅವಕಾಶ ನೀಡಲಾಗಿದ್ದು , ಇಂದು ನಡೆಯುವ ಕಲಾಪದಲ್ಲಿ ಚರ್ಚೆ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಿಯರಂಜನ್ ದಾಸ್‌‌ಮುನ್ಶಿ ತಿಳಿಸಿದ್ದಾರೆ.

ಸಂಸತ್ ಕಲಾಪದ ಕಡಿಮೆ ಅವಧಿಯಲ್ಲಿ ಭಾರತ-ಅಮೆರಿಕ ನಡುವಿನ ಪರಮಾಣು ಒಪ್ಪಂದದ ಕುರಿತು ಕೇವಲ ಒಪ್ಪಂದದ ದೃಷ್ಟಿಕೋನ ಮತ್ತು ಸಾಧಕ-ಬಾಧಕಗಳ ಚರ್ಚೆ ನಡೆಯಲಿದೆ. ಅಂದರೆ ಅಂತಿಮ ನಿರ್ಧಾರ ಸಂಸತ್‌ನಲ್ಲಿ ಕೈಗೊಳ್ಳಲಾಗುತ್ತದೆ ಎಂಬುದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅವೆಲ್ಲವೂ ಒಪ್ಪಂದದ ಬಗ್ಗೆ ಮತಕ್ಕೆ ಹಾಕುವ ಮೂಲಕ ಚರ್ಚೆ ಮತ್ತು ಪರಿಣಾಮದ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಮುನ್ಶಿ ತಿಳಿಸಿದರು.

ಸರಕಾರ ಮಾಡಿಕೊಳ್ಳುವ ಒಪ್ಪಂದದ ವಿರುದ್ಧ ಎಲ್ಲ ಪಕ್ಷಗಳೂ ವಿರೋಧವಾಗಿರುವುದಾಗಿ ಎಡಪಕ್ಷಗಳು ತಿಳಿಸಿದ್ದು, ಈ ಬಗ್ಗೆ ಕೇಂದ್ರ ತನ್ನ ನಿರ್ಧಾರವನ್ನು ಪ್ರಕಟಿಸಬೇಕಾಗಿದೆ ಎಂದು ಎಡಪಕ್ಷಗಳು ಹೇಳಿವೆ.
ಮತ್ತಷ್ಟು
ಆದಿವಾಸಿಗಳಿಗೆ ಪರಿಶಿಷ್ಟರ ಸ್ಥಾನಮಾನವಿಲ್ಲ
ತಸ್ಲೀಮಾಗೆ ರಕ್ಷಣೆ ನೀಡಲು ಸಿದ್ಧ: ಮೋದಿ
ಗುಜರಾತಿನಲ್ಲಿ ಪ್ರಚಾರಕ್ಕೆ ಚಾಲನೆ
ಶಿರಡಿ ಸಾಯಿ ತತ್ವಗಳ ಪಾಲನೆ ಅಗತ್ಯ: ರಾಷ್ಟ್ರಪತಿ
ಕಿರಣ್ ಬೇಡಿ ಸ್ವಯಂ ನಿವೃತ್ತಿಗೆ ಅರ್ಜಿ
ಸುಪ್ರೀಂಕೋರ್ಟ್‌ನಿಂದ ಸಂಜಯ್ ದತ್‌ಗೆ ಜಾಮೀನು