1993ರ ಮುಂಬೈ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದ ಬಾಲಿವುಡ್ ನಟ ಸಂಜಯ್ ದತ್ ಅವರು ಗುರುವಾರ ಪುಣೆಯ ಯರವಾಡ ಜೈಲಿನಿಂದ ಬಿಡುಗಡೆಯಾಗುವ ಸಂಭವವಿದೆ. ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಟಾಡಾ ಕೋರ್ಟ್‌ನಿಂದ ಶಿಕ್ಷೆಗೊಳಗಾದ ದತ್ ಶಸ್ತ್ರಾಸ್ತ್ರ ಕಾಯ್ದೆಯಡಿ 6 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ.
ದತ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಮುಂಚೆ ಕೆಲವು ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಕನಿಷ್ಠ 2 ದಿನಗಳು ಬೇಕಾಗುತ್ತದೆಂದು ಅವರ ವಕೀಲ ಕರಣ್ ಸಿಂಗ್ ಸೋಮವಾರ ತಿಳಿಸಿದ್ದರು. ಆದಾಗ್ಯೂ, ಅವರು ಬುಧವಾರ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಸುಪ್ರೀಂಕೋರ್ಟ್ ನಿರ್ಧಾರದಿಂದ ದತ್ ಸೋದರಿ ಪ್ರಿಯಾ ದತ್ ನಿಟ್ಟುಸಿರುಬಿಟ್ಟಿದ್ದು, ತಮ್ಮ ಕುಟುಂಬಕ್ಕೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಪೂರ್ಣನಂಬಿಕೆಯಿದೆಯೆಂದು ಹೇಳಿದರು. ಮುಂಬೈ ಸ್ಫೋಟ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ಆರು ತಿಂಗಳಲ್ಲಿ ನಡೆಸಲಿದ್ದು, ದತ್ ಅಲ್ಲಿಯವರೆಗೆ ನಿಶ್ಚಿಂತೆಯಿಂದ ಇರಬಹುದು.
|