ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಣ್ವಸ್ತ್ರ ಪರೀಕ್ಷೆ ಹಕ್ಕಿಗೆ ಧಕ್ಕೆಯಿಲ್ಲ: ಸಿಂಗ್
PTI
ಸಂಸತ್ತಿನಲ್ಲಿ ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಬುಧವಾರ ಮಾತನಾಡಿದ ಪ್ರಧಾನಮಂತ್ರಿ ಮನಮೋಹನ ಸಿಂಗ್, ಒಪ್ಪಂದವು ಭಾರತದ ಅಣ್ವಸ್ತ್ರ ಪರೀಕ್ಷೆ ನಡೆಸುವ ಹಕ್ಕನ್ನು ಕಿತ್ತುಕೊಳ್ಳುತ್ತದೆಂಬ ಪ್ರತಿಪಕ್ಷದ ಆರೋಪಗಳನ್ನು ನಿರಾಕರಿಸಿದ್ದಾರೆ. ಒಪ್ಪಂದದ ಬಗ್ಗೆ ಚರ್ಚೆಯನ್ನು ಆರಂಭಿಸಿದ ಪ್ರತಿಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿ ಕಠಿಣವಾದ ಪದಗಳಲ್ಲಿ ಖಂಡಿಸಿದರು.

ಪರಮಾಣು ಒಪ್ಪಂದವು ಭಾರತದ ಸಾರ್ವಬೌಮತೆಗೆ ಧಕ್ಕೆ ತರುತ್ತದೆಂದು ಹೇಳಿದ ಅವರು ಸ್ವಾಭಿಮಾನ ಹೊಂದಿರುವ ಯಾವುದೇ ರಾಷ್ಟ್ರ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು. ಪರಮಾಣು ಒಪ್ಪಂದದ ಬಗ್ಗೆ ವಿಶಾಲವಾದ ಒಮ್ಮತ ಮೂಡದಿರುವಾಗ, ಅದನ್ನು ಅನುಷ್ಠಾನಕ್ಕೆ ತರಲು ಪ್ರಧಾನಿ ಮನಮೋಹನ ಸಿಂಗ್ ಆತುರ ತೋರುವುದೇಕೆಂದು ಅವರು ಪ್ರಶ್ನಿಸಿದರು.

.ಆಡ್ವಾಣಿ ತಮ್ಮ ಬತ್ತಳಿಕೆಯಿಂದ ಎಲ್ಲ ರೀತಿಯ ಟೀಕಾಸ್ತ್ರಗಳನ್ನು ಬಿಡಲು ಮರೆಯಲಿಲ್ಲ. ಕಾಂಗ್ರೆಸ್ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಹಾಗೂ ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಕೂಡ ಸಾರ್ವಭೌಮತೆಯ ಮೇಲೆ ಇಂತಹ ಅತಿಕ್ರಮಣವನ್ನು ಸಹಿಸುತ್ತಿರಲಿಲ್ಲ ಎಂದು ಆಡ್ವಾಣಿ ಹೇಳಿದರು.
ಮತ್ತಷ್ಟು
ನಸ್ರೀನ್‌ಗೆ ಆಶ್ರಯ ಮುಂದುವರಿಕೆ
ಮೋದಿ ಮಣಿನಗರದಿಂದ ನಾಮಪತ್ರ ಸಲ್ಲಿಕೆ
ಜೈಲಿನಿಂದ ಇಂದು ದತ್ ಬಿಡುಗಡೆ ಸಂಭವ
ನಸ್ರೀನ್ ಕುರಿತು ಸಂಸತ್ತಿನಲ್ಲಿ ಹೇಳಿಕೆ
ಗುಜರಾತ್: ಉತ್ತರದಲ್ಲಿ ನಷ್ಟ, ದಕ್ಷಿಣದಲ್ಲಿ ಲಾಭ
ಸಂಸತ್ತಿನಲ್ಲಿಂದು ಅಣು ಒಪ್ಪಂದ