ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮತ್ತೊಮ್ಮೆ ಜೈಲಿನಿಂದ ದತ್‌ಗೆ ಮುಕ್ತಿ
PTI
ಬಾಲಿವುಡ್ ಖ್ಯಾತಿಯ ನಟ ಸಂಜಯ್ ದತ್ ಅವರು ಗುರುವಾರ ಬೆಳಿಗ್ಗೆ ಪುಣೆಯ ಯೆರವಾಡ ಜೈಲಿನಿಂದ ಬಿಡುಗಡೆಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 38ದಿನಗಳನ್ನು ಜೈಲು ಕಂಬಿಯ ಹಿಂದೆ ೋಕೈದಿಯಾಗಿ ದಿನ ಕಳೆದಿದ್ದು, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ತನಗಿದೆ ಎಂದು ವಿಶ್ವಾಸವಿರಿಸಿದ್ದ ಮುನ್ನಾ ಭಾಯ್‌‌ಗೆ ಕೊನೆಗೂ ಬುಧವಾರದಂದು ಸರ್ವೊಚ್ಛನ್ಯಾಯಾಲಯ ಜಾಮೀನು ನೀಡಿದೆ.

ಮುಂಬೈ ಮಹಾನಗರಿಯನ್ನು 1993ರಲ್ಲಿ ತಲ್ಲಣಗೊಳಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್‌‌ಗೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಟಾಡಾ ನ್ಯಾಯಾಲಯ ಆರು ವರ್ಷಗಳ ಶಿಕ್ಷೆ ವಿಧಿಸಿತ್ತು.

ಯೆರವಾಡ ಜೈಲಿನಿಂದ ಇಂದು ಬೆಳಿಗ್ಗೆ ಜೈಲು ಕಂಬಿಯಿಂದ ಬಿಡುಗಡೆಗೊಂಡ ಸಹ ಆರೋಪಿ ಯೂಸೂಫ್ ನೌವಾಲ್ಲಾ ಜತೆ ಹೊರಬರುತ್ತಿದ್ದಂತೆಯೇ ಅಭಿಮಾನಿಗಳು ಜೈಕಾರದ ಮೂಲಕ ಸ್ವಾಗತಿಸಿದರು.

ಜೈಲಿನಿಂದ ಬಿಡುಗಡೆಗೊಂಡ ಸಂಜಯ್ ಪುಣೆಯ ಲೋಹೆಗಾನ್ ವಿಮಾನನಿಲ್ದಾಣದಿಂದ ಮುಂಬೈ ವಾಪಸಾಗಲಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕಳೆದ ಬಾರಿ ಸಂಜಯ್ ಜೈಲಿನಿಂದ ಜಾಮೀನು ಮೇಲೆ ಹೊರಬಂದಾಗ, ಪೊಲೀಸ್ ಅಭಿಮಾನಿಗಳು ಕೈಕುಲುಕಿ, ಬಿಗಿದಪ್ಪಿದ ಪ್ರಕರಣ ಮಾಧ್ಯಮಗಳಲ್ಲಿ ಪ್ರಕಟವಾಗಿ ಅಮಾನತು ಶಿಕ್ಷೆ ಅನುಭವಿಸಿದ್ದ ನೆನಪು ಮಾಸಿರದ ಕಾರಣ ಈ ಬಾರಿ ಅಂತಹ ತಪ್ಪು ಮಾಡಲು ಯಾರು ಮುಂದೆ ಹೋಗಿಲ್ಲ.

ಗುರುವಾರ ಬೆಳಿಗ್ಗೆ ದತ್ ವಕೀಲ ಸತೀಶ್ ಮಾನ್‌‌ಶಿಂಧೆ ಅವರು ಮುಂಬೈಯಿಂದ ಜಾಮೀನು ಆದೇಶ ಪ್ರತಿಯೊಂದಿಗೆ ಯೆರವಾಡಕ್ಕೆ ಆಗಮಿಸಿದ 30ನಿಮಿಷಗಳೊಳಗೆ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದತ್ ಅವರನ್ನು ಬಿಡುಗಡೆ ಮಾಡಲಾಯಿತು.
ಮತ್ತಷ್ಟು
ಅಣ್ವಸ್ತ್ರ ಪರೀಕ್ಷೆ ಹಕ್ಕಿಗೆ ಧಕ್ಕೆಯಿಲ್ಲ: ಸಿಂಗ್
ನಸ್ರೀನ್‌ಗೆ ಆಶ್ರಯ ಮುಂದುವರಿಕೆ
ಮೋದಿ ಮಣಿನಗರದಿಂದ ನಾಮಪತ್ರ ಸಲ್ಲಿಕೆ
ಜೈಲಿನಿಂದ ನಾಳೆ ದತ್ ಬಿಡುಗಡೆ ಸಂಭವ
ನಸ್ರೀನ್ ಕುರಿತು ಸಂಸತ್ತಿನಲ್ಲಿ ಹೇಳಿಕೆ
ಗುಜರಾತ್: ಉತ್ತರದಲ್ಲಿ ನಷ್ಟ, ದಕ್ಷಿಣದಲ್ಲಿ ಲಾಭ