ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತಮಿಳುನಾಡಿನಲ್ಲಿ ಮಹಿಳಾ ಕಮಾಂಡೊ
ಟಿವಿ ಸರಣಿ ಚಾರ್ಲೀಸ್ ಏಂಜಲ್ಸ್ ಸ್ವರೂಪದ ಮಹಿಳಾ ಪಡೆ ತಮಿಳುನಾಡಿನಲ್ಲಿದ್ದು, ಅಲ್ಲಿನ ಪೊಲೀಸ್ ಕಮಾಂಡೊ ಶಾಲೆಯಿಂದ 382 ಮಹಿಳಾ ಕಮಾಂಡೊಗಳು ತೇರ್ಗಡೆಯಾಗಿದ್ದಾರೆ. 2003ರಲ್ಲಿ ಮಾಜಿಮುಖ್ಯಮಂತ್ರಿ ಜಯಲಲಿತಾ ಸರ್ವ ಮಹಿಳೆಯರ ತುಕಡಿಯನ್ನು ನೇಮಿಸುವ ಮೂಲಕ ತಮಿಳುನಾಡು ರಾಷ್ಟ್ರದಲ್ಲೇ ಮಹಿಳಾ ಕಮಾಂಡೊ ಪಡೆ ಹೊಂದಿದ ಪ್ರಥಮ ರಾಜ್ಯವಾಯಿತು.

ಭಯೋತ್ಪಾದನೆ ಬೆದರಿಕೆಗಳನ್ನು ಮತ್ತು ನೈಸರ್ಗಿಕ ಪ್ರಕೋಪಗಳನ್ನು ನಿಭಾಯಿಸಲು ಹಾಗೂ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ವಿಭಾಗಕ್ಕೆ ನೆರವು ನೀಡಲು ಈಗ 1590 ಮಹಿಳಾ ಕಮಾಂಡೊಗಳು ಇಲ್ಲಿ ಸಜ್ಜಾಗಿದ್ದಾರೆ.

ಈ ಕಮಾಂಡೊಗಳಲ್ಲಿ ಬಹುತೇಕ ಮಂದಿ ಗ್ರಾಮೀಣ ಪ್ರದೇಶಗಳಿಂದ ಬಂದವರು. ಅವರು ತರಬೇತಿಯ ಮೂಲಕ ಕಠಿಣವಾದ ಕೆಲಸಗಳನ್ನು ಕೈಗೆತ್ತಿಕೊಳ್ಳುವ ದಿಟ್ಟ ಮಹಿಳಾ ಪೊಲೀಸರಾಗಿ ಪರಿವರ್ತನೆಯಾಗಿದ್ದಾರೆ.

ತರಬೇತಿಯು ನಮ್ಮನ್ನು ಯಾವುದೇ ಕಾರ್ಯಾಚರಣೆ ಕೈಗೆತ್ತಿಕೊಳ್ಳುವ ಆತ್ಮವಿಶ್ವಾಸವನ್ನು ನೀಡಿದೆ ಎಂದು ಕಮಾಂಡೊ ಪಡೆಯ ಕವಿತಾ ಮಣಿ ಎಂಬವರು ಹೇಳಿದ್ದಾರೆ. ಸುಮಾರು 6 ವಾರಗಳ ತೀವ್ರ ತರಬೇತಿ ಬಳಿಕ ಈ ಕಾಠಿಣ್ಯ ಅವರಿಗೆ ಬಂದಿದೆಯೆಂದು ಹೇಳಲಾಗಿದೆ.
ಮತ್ತಷ್ಟು
ಚಿರತೆಯ ಕಣ್ಣಾಮುಚ್ಚಾಲೆ ಆಟ
ಮತ್ತೊಮ್ಮೆ ಜೈಲಿನಿಂದ ದತ್‌ಗೆ ಮುಕ್ತಿ
ಅಣ್ವಸ್ತ್ರ ಪರೀಕ್ಷೆ ಹಕ್ಕಿಗೆ ಧಕ್ಕೆಯಿಲ್ಲ: ಸಿಂಗ್
ನಸ್ರೀನ್‌ಗೆ ಆಶ್ರಯ ಮುಂದುವರಿಕೆ
ಮೋದಿ ಮಣಿನಗರದಿಂದ ನಾಮಪತ್ರ ಸಲ್ಲಿಕೆ
ಜೈಲಿನಿಂದ ನಾಳೆ ದತ್ ಬಿಡುಗಡೆ ಸಂಭವ