ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವ್ಯಾಪಕ ಹಿಂಸಾಚಾರ:ಅಸ್ಸಾಂಗೆ ಮೊಯ್ಲಿ
ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಆದಿವಾಸಿಗಳು ನಡೆಸಿದ ಪ್ರತಿಭಟನೆಯು 6ನೇ ದಿನಕ್ಕೆ ಕಾಲಿಟ್ಟಿದ್ದು, ಅಸ್ಸಾಂ ವ್ಯಾಪಕ ಹಿಂಸಾಚಾರದಿಂದ ತಲ್ಲಣಿಸಿದೆ. ಕಾಂಗ್ರೆಸ್ ಪರಿಸ್ಥಿತಿಯ ಅವಲೋಕನದ ಸಲುವಾಗಿ ರಾಜ್ಯದ ಉಸ್ತುವಾರಿ ವಹಿಸಿರುವ ವೀರಪ್ಪ ಮೊಯ್ಲಿ ಅವರನ್ನು ಅಲ್ಲಿಗೆ ಕಳಿಸಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ನೆರೆಯ ಚಹಾ ಎಸ್ಟೇಟ್‌ಗಳಿಂದ ಆಗಮಿಸಿದ ಸಾವಿರಾರು ಆದಿವಾಸಿಗಳು ಪ್ರತಿಭಟನೆ ನಡೆಸಿದ್ದರಿಂದ ಜೋಹ್ರಾಟ್, ಶಿವಸಾಗರ್ ಮತ್ತು ಗೋಲಾಗಾಟ್ ಜಿಲ್ಲೆಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಯಿತು. ಸುಮಾರು 2000 ಆದಿವಾಸಿಗಳು ಜೋಹ್ರಾಟ್ ನಗರಕ್ಕೆ ತೆರಳಲು ಯತ್ನಿಸಿದಾಗ ಟಿಟಾಬೊರ್ ಬಳಿ ಅವರನ್ನು ಅಡ್ಡಗಟ್ಟಿದ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ಈ ಘಟನೆಯಿಂದ ಪ್ರಕ್ಷುಬ್ಧ ಸ್ಥಿತಿ ಉಂಟಾಗಿ ಎಲ್ಲ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಮುಚ್ಚಲಾಯಿತು. ಶನಿವಾರ ಸ್ಥಳೀಯರು ಮತ್ತು ಆದಿವಾಸಿಗಳ ನಡುವೆ ಘರ್ಷಣೆ ಸಂಭವಿಸಿ ಒಬ್ಬ ವ್ಯಕ್ತಿ ಬಲಿಯಾಗಿ 200 ಜನರು ಗಾಯಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ವೀರಪ್ಪ ಮೊಯ್ಲಿ ಅವರನ್ನು ಪರಿಸ್ಥಿತಿಯ ಪರಾಮರ್ಶೆಗೆ ಕಳಿಸಿದೆ.

ಬುಧವಾರ ತಡರಾತ್ರಿಯಲ್ಲಿ ಆದಿವಾಸಿಗಳು ಮದುವೆ ದಿಬ್ಬಣದ ಮೇಲೆ ದಾಳಿಮಾಡಿದ್ದಲ್ಲದೇ ಬಸ್ಸೊಂದನ್ನು ಸುಟ್ಟಿದ್ದರಿಂದ ವಧುವರನ ಸಮೇತ 12 ಮಂದಿ ಗಾಯಗೊಂಡಿದ್ದಾರೆ. ಚಬುವ, ತೆಂಗಕ್ಕಾತ್, ಕಲೈನ್ ಮತ್ತು ರಂಗಪಾರಾದಲ್ಲಿ ಘರ್ಷಣೆ ನಡೆದ ಬಗ್ಗೆ ವರದಿಗಳು ಬಂದಿದ್ದು, ಸೇಡಿನ ಹಿಂಸಾಚಾರ ಹರಡುವುದರ ದ್ಯೋತಕವಾಗಿದೆ.
ಮತ್ತಷ್ಟು
ಜಗದೀಶ್ ಟೈಟ್ಲರ್‌ಗೆ ಸಿಬಿಐ ಕ್ಲೀನ್ ಚಿಟ್
ಏಮ್ಸ್ ಸಂಸ್ಥೆಯ ವೈದ್ಯರ ಮುಷ್ಕರ
ತಮಿಳುನಾಡಿನಲ್ಲಿ ಮಹಿಳಾ ಕಮಾಂಡೊ
ಚಿರತೆಯ ಕಣ್ಣಾಮುಚ್ಚಾಲೆ ಆಟ
ಮತ್ತೊಮ್ಮೆ ಜೈಲಿನಿಂದ ದತ್‌ಗೆ ಮುಕ್ತಿ
ಅಣ್ವಸ್ತ್ರ ಪರೀಕ್ಷೆ ಹಕ್ಕಿಗೆ ಧಕ್ಕೆಯಿಲ್ಲ: ಸಿಂಗ್