ಭಾರತ-ಅಮೆರಿಕ ಪರಮಾಣು ಒಪ್ಪಂದದಲ್ಲಿ ಕಾಂಗ್ರೆಸ್‌ಗೆ ಶರಣಾಗಿರುವ ಸಿಪಿಐ ಮತ್ತು ಸಿಪಿಎಂ ಪಕ್ಷಗಳನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಪರಮಾಣು ಒಪ್ಪಂದದ ಬಗ್ಗೆ ತೋರಿಕೆಗೆ ದನಿ ಎಬ್ಬಿಸುವ ವಾಮಪಕ್ಷಗಳು ಕಾಂಗ್ರೆಸ್‌ಗೆ ಮಣಿದಿವೆ ಎಂದು ಟೀಕಿಸಿದ ಬಿಜೆಪಿ ತಮ್ಮ ಪಕ್ಷವನ್ನು ಪುನಃ ಅಧಿಕಾರಕ್ಕೆ ತಂದರೆ ಒಪ್ಪಂದದ ಮರುಮಾತುಕತೆ ನಡೆಸುತ್ತದೆ. ಅದು ಸಾಧ್ಯವಾಗದಿದ್ದರೆ ಒಪ್ಪಂದವನ್ನೇ ರದ್ದುಮಾಡುತ್ತದೆಂದು ಹೇಳಿದೆ,
ಬಿಜೆಪಿಯ ಹಿರಿಯ ನಾಯಕ ವೆಂಕಯ್ಯ ನಾಯ್ಡು ವರದಿಗಾರರ ಜತೆ ಮಾತನಾಡುತ್ತಾ, ಕಾಂಗ್ರೆಸ್ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕಕ್ಕೆ ಶರಣಾಗಿದ್ದರೆ ಒಪ್ಪಂದದ ಬಗ್ಗೆ ಅತಿಯಾದ ಗದ್ದಲವೆಬ್ಬಿಸಿದ ಕಮ್ಯುನಿಸ್ಟ್ ಪಕ್ಷಗಳು ಕಾಂಗ್ರೆಸ್‌ಗೆ ಶರಣಾಗಿವೆ ಎಂದು ಹೇಳಿದರು.
ನಂದಿ ಗ್ರಾಮ ಮತ್ತು ಪರಮಾಣು ಒಪ್ಪಂದದ ಬಗ್ಗೆ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳ ನಡುವೆ ವ್ಯಾಪಾರ ವಿನಿಮಯವಾಗಿದೆಯೆಂದು ಅವರು ಟೀಕಿಸಿದರು. ಸಂಸತ್ತಿನಲ್ಲಿ ಬುಧವಾರ ಪರಮಾಣು ಒಪ್ಪಂದದ ಬಗ್ಗೆ ಮಾತುಕತೆಯಲ್ಲಿ ವಾಮಪಕ್ಷಗಳ ಇಬ್ಬಗೆಯ ಧೋರಣೆ ಬಯಲಾಗಿದೆ ಎಂದು ಹೇಳಿದ ನಾಯ್ಡು, ಅವರು ನಿಜವಾದ ಹೋರಾಟ ಮಾಡಲು ಸಿದ್ಧರಾಗದೇ ಸುಮ್ಮನೇ ದನಿ ಮಾಡುವುದಕ್ಕೆ ಸೀಮಿತಗೊಳಿಸಿತೆಂದು ಹೇಳಿದರು.
|