ಬಹುಕೋಟಿ ರೂ. ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿ ಹತ್ಯೆ ಪ್ರಕರಣವೊಂದರಲ್ಲಿ ತಪ್ಪಿತಸ್ಥನೆಂದು ತಿಳಿದುಬಂದಿದೆ. ಮುಖ್ಯಆರೋಪಿ ತೆಲಗಿ ಮತ್ತು ಇನ್ನೂ 7 ಮಂದಿ 2001ರ ಆಗಸ್ಟ್‌ನಲ್ಲಿ ಭಟ್ಟಿ ಎಂಬ ಚಾಲಕನನ್ನು ಹತ್ಯೆಮಾಡಿದ್ದಾರೆಂದು ಆರೋಪಿಸಲಾಗಿದೆ.
ತಮಿಳುನಾಡಿನಲ್ಲಿ ಭಟ್ಟಿಯು ತೆಲಗಿಯ ನಕಲಿ ಛಾಪಾಕಾಗದ ಹಗರಣವನ್ನು ನಿಭಾಯಿಸುತ್ತಿದ್ದನೆಂದು ಹೇಳಲಾಗಿದ್ದು, ತೆಲಗಿಯಿಂದ 2.5 ಲಕ್ಷ ರೂ,ಗಳನ್ನು ಕದಿಯಲು ಯತ್ನಿಸಿದ್ದರಿಂದ ತೆಲಗಿ ಮತ್ತು ಸಂಗಡಿಗರಿಂದ ಹತ್ಯೆಗೀಡಾಗಿದ್ದಾನೆಂದು ತಿಳಿದುಬಂದಿದೆ.
ತೆಲಗಿ ಸೇರಿದಂತೆ ಐವರ ವಿರುದ್ಧ ಕೊಲೆಗೆ ಸಮಾನವಲ್ಲದ ನರಹತ್ಯೆಯ ಆರೋಪ ಹೊರಿಸಲಾಗಿದ್ದರೆ ಇನ್ನುಳಿದ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ. ಕೋರ್ಟ್ ಶುಕ್ರವಾರ ತನ್ನ ತೀರ್ಪುಗಳನ್ನು ಪ್ರಕಟಿಸಲಿದೆ.
|