ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಟೈಟ್ಲರ್‌ಗೆ ಕ್ಲೀನ್ ಚಿಟ್ ವಿರುದ್ಧ ಪರಿಶೀಲನೆ
ಸಿಖ್ ವಿರೋಧಿ ಹಿಂಸಾಚಾರದಲ್ಲಿ ಮಾಜಿ ಕೇಂದ್ರಸಚಿವ ಜೈಗದೀಶ್ ಟೈಟ್ಲರ್ ವಿರುದ್ಧ ಪ್ರಕರಣಕ್ಕೆ ತೆರೆ ಎಳೆದ ಸಿಬಿಐ ನಿರ್ಧಾರದ ಬಗ್ಗೆ ದೆಹಲಿ ಕೋರ್ಟೊಂದು ಪರಿಶೀಲನೆ ನಡೆಸುವ ಸಂಭವವಿದೆ.

ಸಿಖ್ಖರನ್ನು ಹತ್ಯೆ ಮಾಡಲು ಟೈಟ್ಲರ್ ಪ್ರಚೋದನೆ ನೀಡಿದರೆಂದು ಆರೋಪಿಸಿರುವ ಜಸ್ಬೀರ್ ಸಿಂಗ್ ಅಮೆರಿಕದಲ್ಲಿ ನೆಲೆಸಿರುವುದರಿಂದ ಮತ್ತು ಅವರು ಇರುವ ಸ್ಥಳ ತಿಳಿದಿಲ್ಲವಾದ್ದರಿಂದ ಅವರ ತನಿಖೆ ಸಾಧ್ಯವಾಗುತ್ತಿಲ್ಲ ಎಂದು ಸಿಬಿಐ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿತ್ತು. ಈ ಆರೋಪಪಟ್ಟಿಯ ಪ್ರತಿಗಳನ್ನು ನೀಡುವಂತೆ ಎರಡು ಸಿಖ್ ಸಂಘಟನೆಗಳಾದ ದೆಹಲಿ ಗುರುದ್ವಾರ ನಿರ್ವಹಣೆ ಸಮಿತಿ ಮತ್ತು ನ.84ರ ಹತ್ಯಾಕಾಂಡದ ನ್ಯಾಯ ಸಮಿತಿ ಅ.4ರಂದು ಅರ್ಜಿ ಸಲ್ಲಿಸಿದ್ದವು.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಂಜೀವ್ ಜೈನ್ ಸಿಖ್ ಸಂಸ್ಥೆಗಳನ್ನು ಪ್ರತಿನಿಧಿಸುವ ಹಿರಿಯ ವಕೀಲ ಎಚ್.ಎಸ್.ಫೂಲ್ಕಾ ಅವರಿಗೆ ಜಸ್ಬೀರ್ ಸಿಂಗ್ ವಿಳಾಸವನ್ನು ಒದಗಿಸುವಂತೆ ಆದೇಶಿಸಿದರು. ಈ ಪ್ರಕರಣದಲ್ಲಿ ಸಾಕ್ಷಿ ಹೇಳಿಕೆ ದಾಖಲಿಸಲು ಬಯಸಿದ್ದಾರೆಂದು ವಕೀಲರು ವಾದಿಸಿರುವುದರಿಂದ ಅವರಿಗೆ ಈ ಆದೇಶ ನೀಡಲಾಯಿತು.

ನೀವು ಜಸ್ಬೀರ್ ಸಿಂಗ್ ಅವರ ಸಾಕ್ಷ್ಯದ ಮೇಲೆ ಅವಲಂಬಿತರಾಗಿದ್ದೀರಿ. ಅವರ ವಿಳಾಸ ಕೊಟ್ಟರೆ ಪತ್ತೆ ಹಚ್ಚುವಂತೆ ನಾನು ಸಿಬಿಐಗೆ ಆದೇಶಿಸುವುದಾಗಿ ಎಸಿಎಂಎಂ ತಿಳಿಸಿ ಡಿ.6ರೊಳಗೆ ಸಿಂಗ್ ವಿಳಾಸ ನೀಡುವಂತೆ ವಕೀಲರಿಗೆ ಸೂಚಿಸಿದರು.
ಮತ್ತಷ್ಟು
ತೆಲಗಿ ವಿರುದ್ಧ ನರಹತ್ಯೆ ಆರೋಪ
ಕಾಂಗ್ರೆಸ್‌ಗೆ ವಾಮಪಕ್ಷಗಳ ಶರಣು:ಬಿಜೆಪಿ
ವ್ಯಾಪಕ ಹಿಂಸಾಚಾರ:ಅಸ್ಸಾಂಗೆ ಮೊಯ್ಲಿ
ಜಗದೀಶ್ ಟೈಟ್ಲರ್‌ಗೆ ಸಿಬಿಐ ಕ್ಲೀನ್ ಚಿಟ್
ಏಮ್ಸ್ ಸಂಸ್ಥೆಯ ವೈದ್ಯರ ಮುಷ್ಕರ
ತಮಿಳುನಾಡಿನಲ್ಲಿ ಮಹಿಳಾ ಕಮಾಂಡೊ