ರಷ್ಯಾದ ಮಹಿಳಾ ಪ್ರವಾಸಿಯೊಬ್ಬರ ಮೈಮೇಲೆ ಮೋಟರ್ ಸೈಕಲ್‌ನಲ್ಲಿ ಬಂದ ಮುಖವಾಡಧಾರಿ ದುಷ್ಕರ್ಮಿಗಳು ಆಸಿಡ್ ಎರಚಿದ್ದರಿಂದ ಅವರಿಗೆ ತೀವ್ರ ಸುಟ್ಟಗಾಯಗಳಾದ ಘಟನೆ ಸಂಭವಿಸಿದೆ.
35 ವರ್ಷ ವಯಸ್ಸಿನ ಕತ್ರಿನಾ ಎಂಬ ರಷ್ಯಾದ ಪ್ರವಾಸಿ ಮಹಿಳೆ ಬುಧವಾರ ರಾತ್ರಿ ತನ್ನ ಸ್ನೇಹಿತೆ ಮಾಸಿಬಾ ಜತೆಯಲ್ಲಿ ಹೊಟೆಲ್ ಕೋಣೆಯಿಂದ ಭೋಜನಕ್ಕಾಗಿ ಹೊರಟಿದ್ದರು. ಮೋಟಾರ್‌ಬೈಕಿನಲ್ಲಿ ಬಂದ ಕೆಲವು ಯುವಕರು ಫೂಲ್ ಸಯ್ಯದ್ ಕ್ರಾಸಿಂಗ್ ಬಳಿ ಮಹಿಳೆಯರನ್ನು ಲೂಟಿ ಮಾಡುವ ಸಲುವಾಗಿ ಗುಂಡು ಹಾರಿಸಿದರು.
ಗುಂಡುಗಳು ಗುರಿ ತಪ್ಪಿದಾಗ ದುಷ್ಕರ್ಮಿಗಳು ಕತ್ರಿನಾ ಮೇಲೆ ಆಸಿಡ್ ಎರಚಿ,ಸೆಲ್ ಫೋನ್ ಕಸಿದುಕೊಂಡು ಪರಾರಿಯಾದರು. ತೀವ್ರ ಸುಟ್ಟಗಾಯಗಳಾದ ಕತ್ರೀನಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
|