ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮರುಪ್ರತಿಕ್ರಿಯೆಗೆ ಕರುಣಾನಿಧಿ ನಿರಾಕರಣೆ
ಮಲೇಶಿಯಾದಲ್ಲಿ ತಮಿಳರನ್ನು ರಕ್ಷಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಕರುಣಾನಿಧಿ ಮನವಿ ಮಾಡಿದ್ದು, ಈ ಬಗ್ಗೆ ಮಲೇಶಿಯಾ ಕಟುವಾಗಿ ಟೀಕಿಸಿದ್ದು, ಈ ಕುರಿತು ಮರುಪ್ರತಿಕ್ರಿಯೆ ನೀಡಲು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ನಿರಾಕರಿಸಿದ್ದಾರೆ.

ಅದಕ್ಕೆ ನನಗೆ ಉತ್ತರಿಸಲು ಇಷ್ಟವಿಲ್ಲ, ಮಲೇಶಿಯಾದಲ್ಲಿರುವ ತಮಿಳರ ಸಮಸ್ಯೆಗಳ ಕುರಿತು ಪ್ರಧಾನಮಂತ್ರಿಯವರ ಗಮನಕ್ಕೆ ತರುವುದು ನನ್ನ ಕರ್ತವ್ಯವಾಗಿತ್ತು, ರಾಜ್ಯದ ಜನರ ಸಲುವಾಗಿ ನಾನು ಅದನ್ನು ಮಾಡಿದ್ದೇನೆ ಎಂದು ಕರುಣಾನಿಧಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಅಲ್ಲದೆ ಈ ವಿವಾದದಲ್ಲಿ ಮಲೇಶಿಯಾ ಪ್ರಧಾನಿಯೊಂದಿಗೆ ಭಾಗಿಯಾಗಲು ನನಗೆ ಇಷ್ಟವಿಲ್ಲ ಎಂದು ಅವರು ಹೇಳಿದರು.

ಕರುಣಾನಿಧಿ ವಿರುದ್ಧ ಮಲೇಶಿಯ ಸಚಿವರು ಮಾಡಿದ ವಿಮರ್ಶಾತ್ಮಕ ಟೀಕೆಯ ಕುರಿತು ಪ್ರತಿಕ್ರಯಿಸಿದ ಕರುಣಾನಿಧಿ, ನಾನು ಮಲೇಶಿಯ ಸರಕಾರಕ್ಕೆ ಯಾವುದೇ ಟೀಕೆಯನ್ನು ಮಾಡಿಲ್ಲ. ಕೇವಲ ಮಲೇಶಿಯಾದಲ್ಲಿರುವ ತಮಿಳರನ್ನು ರಕ್ಷಿಸುವ ಕುರಿತಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಧಾನಿಗೆ ಪತ್ರ ಬರೆದಿದ್ದೆ ಎಂದು ಸ್ಪಷ್ಟಪಡಿಸಿದರು.

ಕರುಣಾನಿಧಿ ತನ್ನ ರಾಜ್ಯದಲ್ಲಿರುವ ಸಮಸ್ಯೆಗಳ ಕುರಿತು ಗಮನಹರಿಸಬೇಕೇ ಹೊರತು ಮಲೇಶಿಯಾದಲ್ಲಿನ ಬೆಳವಣಿಗೆಗಳ ಮೇಲಲ್ಲ ಎಂದು ಮಲೇಶಿಯಾದ ಹಿರಿಯ ಸಚಿವರು ಕರುಣಾನಿಧಿಯ ಕುರಿತಾಗಿ ಖಾರವಾಗಿ ಪ್ರತಿಕ್ರಯಿಸಿದ್ದರು.

ಕರುಣಾನಿಧಿ ತಮಿಳುನಾಡಿನವರು ಮಲೇಶಿಯಾದವರಲ್ಲ. ಅವರ ರಾಜ್ಯದಲ್ಲೇ ಸಾಕಷ್ಟು ಸಮಸ್ಯೆಗಳಿದ್ದು, ಅದರ ಬಗ್ಗೆ ಚಿಂತಿಸಬೇಕು ಎಂದು ಪ್ರಧಾನಮಂತ್ರಿ ವಿಭಾಗದ ಸಚಿವ ನಾಜಿರ್ ಅಜೀಜ್ ಉಲ್ಲೇಖಿಸಿದ್ದನ್ನು, ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮತ್ತಷ್ಟು
ರಷ್ಯಾ ಮಹಿಳೆ ಮೇಲೆ ಆಸಿಡ್ ದಾಳಿ
ಟೈಟ್ಲರ್‌ಗೆ ಕ್ಲೀನ್ ಚಿಟ್ ವಿರುದ್ಧ ಪರಿಶೀಲನೆ
ತೆಲಗಿ ವಿರುದ್ಧ ನರಹತ್ಯೆ ಆರೋಪ
ಕಾಂಗ್ರೆಸ್‌ಗೆ ವಾಮಪಕ್ಷಗಳ ಶರಣು:ಬಿಜೆಪಿ
ವ್ಯಾಪಕ ಹಿಂಸಾಚಾರ:ಅಸ್ಸಾಂಗೆ ಮೊಯ್ಲಿ
ಜಗದೀಶ್ ಟೈಟ್ಲರ್‌ಗೆ ಸಿಬಿಐ ಕ್ಲೀನ್ ಚಿಟ್