ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಿಜ್ವಾನುರ್ ಆತ್ಮಹತ್ಯೆಗೆ ಕುಮ್ಮಕ್ಕು
ತನಿಖೆಗಳು ಅಂತ್ಯಗೊಂಡು, ಸುಳ್ಳುಪತ್ತೆ ಪರೀಕ್ಷೆಗಳು ಮುಕ್ತಾಯವಾದ ಬಳಿಕ ಸಿಬಿಐ ರಿಜ್ವಾನುರ್ ರೆಹ್ಮಾನ್ ಅವರ ನಿಗೂಢ ಸಾವಿನ ತನಿಖೆಗೆ ತೆರೆಎಳೆದಿದೆ. ರಿಜ್ವಾನುರ್ ಒತ್ತಡ ಮತ್ತು ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ತನಿಖೆದಾರರಿಗೆ ಬಹುತೇಕ ಖಚಿತವಾಗಿದೆ. ರಿಜ್ವಾನುರ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಕೋಲ್ಕತಾದ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಅನೇಕ ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಸಿಬಿಐ ಸಿದ್ಧತೆ ನಡೆಸುತ್ತಿದೆ.

ಸಿಬಿಐನ ಆರೋಪಿಗಳ ಪಟ್ಟಿಯಲ್ಲಿ ರಿಜ್ವಾನುರ್ ಅವರ ಕೈಗಾರಿಕೋದ್ಯಮಿ ಮಾವ ಅಶೋಕ್ ತೋಡಿ ಮತ್ತು ಅವರ ಸೋದರ ಪ್ರದೀಪ್ ತೋಡಿ ಅಗ್ರಸ್ಥಾನದಲ್ಲಿದ್ದಾರೆ. ಯುವ ಗ್ರಾಫಿಕ್ ವಿನ್ಯಾಸಕಾರನನ್ನು ಆತ್ಮಹತ್ಯೆಗೆ ದೂಡಿದ ಇಬ್ಬರ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಲಿದೆ.ರಿಜ್ವಾನುರ್ ಅವರಿಗೆ ಬೆದರಿಕೆ, ಕಿರುಕುಳ ನೀಡಿದ ಕೋಲ್ಕತಾದ ನಾಲ್ವರು ಅಧಿಕಾರಿಗಳ ವಿರುದ್ಧ ಕೂಡ ಆರೋಪ ದಾಖಲಿಸಲಾಗುವುದು ಎಂದು ಸಿಬಿಐ ಮೂಲಗಳು ಹೇಳಿವೆ.

ಎನ್‌ಜಿಒ ನಡೆಸುವ ಪಪ್ಪು ಎಂದೇ ಹೆಸರಾದ ಸಯ್ಯದ್ ಮೊಹಿಯುದ್ದೀನ್ ಕೋಲ್ಕತಾ ಅಧಿಕಾರಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದು, ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದ ಮೇಲೆ ಆರೋಪಪಟ್ಟಿ ಹೊರಿಸಲಾಗಿದೆ. ರಿಜ್ವಾನುರ್ ಚಿಕ್ಕಪ್ಪ ಸಯದುರ್ ರಹಮಾನ್ ಹೆಸರು ಕೂಡ ಪಟ್ಟಿಯಲ್ಲಿದ್ದು ವಿಚ್ಛೇದನ ಪತ್ರಗಳಿಗೆ ಸಹಿ ಹಾಕುವಂತೆ ರಿಜ್ವಾನುರ್ ಮೇಲೆ ಒತ್ತಡ ಹೇರಲು ಅವನು ತೋಡಿ ಕುಟುಂಬದಿಂದ ಹಣ ಪಡೆದಿದ್ದನೆಂದು ಆರೋಪಿಸಲಾಗಿದೆ.

ರಿಜ್ವಾನುರ್ ಸಾವಿನ ನಿಗೂಢತೆ ಭೇದಿಸಲಾಗಿದ್ದರೂ, ಅದು ಹತ್ಯೆಯಲ್ಲದಿದ್ದರೂ ರಿಜ್ವಾನುರ್ ಆತ್ಮಹತ್ಯೆಗೆ ಪ್ರಚೋದಿಸಿದ ಕಾರಣಕ್ಕಾಗಿ ಕನಿಷ್ಠ 10 ವರ್ಷಗಳ ಕಾಲ ಅವರನ್ನು ಜೈಲಿಗೆ ಕಳಿಸುವ ಸಾಧ್ಯತೆಯಿದೆ.
ಮತ್ತಷ್ಟು
ಮರುಪ್ರತಿಕ್ರಿಯೆಗೆ ಕರುಣಾನಿಧಿ ನಿರಾಕರಣೆ
ರಷ್ಯಾ ಮಹಿಳೆ ಮೇಲೆ ಆಸಿಡ್ ದಾಳಿ
ಟೈಟ್ಲರ್‌ಗೆ ಕ್ಲೀನ್ ಚಿಟ್ ವಿರುದ್ಧ ಪರಿಶೀಲನೆ
ತೆಲಗಿ ವಿರುದ್ಧ ನರಹತ್ಯೆ ಆರೋಪ
ಕಾಂಗ್ರೆಸ್‌ಗೆ ವಾಮಪಕ್ಷಗಳ ಶರಣು:ಬಿಜೆಪಿ
ವ್ಯಾಪಕ ಹಿಂಸಾಚಾರ:ಅಸ್ಸಾಂಗೆ ಮೊಯ್ಲಿ