ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಶುಕ್ರವಾರ ತಮ್ಮ ಆತ್ಮಚರಿತ್ರೆಯ ಪುಸ್ತಕ "ದಿಖಂದಿತ"ದಿಂದ ವಿವಾದಾತ್ಮಕ ಸಾಲುಗಳನ್ನು ಹಿಂತೆಗೆದುಕೊಳ್ಳುವ ಮೂಲಕ ವಿವಾದಕ್ಕೆ ತೆರೆಎಳೆದಿದ್ದಾರೆ. ಪುಸ್ತಕದ ಸಾಲುಗಳು ಕೆಲವು ವರ್ಗದ ಜನರಿಂದ ತೀಕ್ಷ್ಣ ಪ್ರತಿಭಟನೆ ಭುಗಿಲೇಳಲು ಕಾರಣವಾಗಿತ್ತು.
2003ರಲ್ಲಿ ಪಶ್ಚಿಮಬಂಗಾಳ ಸರ್ಕಾರ ಈ ಪುಸ್ತಕವನ್ನು ನಿಷೇಧಿಸಿ ಅದರಲ್ಲಿರುವ ಕೆಲವು ಸಾಲುಗಳು ಕೋಮು ಭಾವನೆಗಳನ್ನು ಕೆರಳಿಸಬಹುದೆಂದು ಆರೋಪಿಸಿತ್ತು, ಇದೇ ಕಾರಣಕ್ಕಾಗಿ 2004ರಲ್ಲಿ ನಸ್ರೀನ್ ವಿರುದ್ಧ ಇಮಾಮ್ ಫತ್ವಾ ಹೊರಡಿಸಿದ್ದರು. ಅವರ ಮುಂಚಿನ ಪುಸ್ತಕ ಲಜ್ಜಾ ಕೂಡ ಬಾಂಗ್ಲಾದೇಶ ಸರ್ಕಾರದಿಂದ ನಿಷೇಧಿಸಲಾಗಿತ್ತು.
1994ರಲ್ಲಿ ನಸ್ರೀನ್ ಅವರನ್ನು ತಾಯ್ನಾಡಿನಿಂದ ಉಚ್ಚಾಟಿಸಿದಾಗಿನಿಂದ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ತಮ್ಮ ವಿವಾದಾತ್ಮಕ ಲೇಖನಕ್ಕೆ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದು ನಸ್ರೀನ್ ಕೆಲವು ವರ್ಷಗಳ ಕೆಳಗೆ ಹೇಳಿದ್ದರು.
|