ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪೋಸ್ಕೊ ಯೋಜನೆ:ಪರ-ವಿರೋಧಿಗಳ ಕದನ
ಉಕ್ಕಿನ ದೈತ್ಯ ಪೋಸ್ಕೊ ಕಂಪೆನಿಯು ಒರಿಸ್ಸಾದ ಜಗತ್‌ಸಿಂಗಪುರದಲ್ಲಿ ಸ್ಥಾಪಿಸಲಿರುವ ಉದ್ದೇಶಿತ ಯೋಜನೆಯಿಂದ ಈ ಪ್ರದೇಶದಲ್ಲಿ ಪುನಃ ಉದ್ವಿಗ್ನ ವಾತಾವರಣ ಉಂಟಾಯಿತು. ಪೋಸ್ಕೊ ಕಾರ್ಖಾನೆಯ ಸ್ಥಳದಲ್ಲಿ ಮೂರು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ಬಿಗುವಿನ ಪರಿಸ್ಥಿತಿಯಿಂದ ಕೂಡಿದೆ. ಒಂದು ವಾರದಲ್ಲೇ ಪೋಸ್ಕೊದ ಪರ ಮತ್ತು ವಿರೋಧಿ ಗುಂಪುಗಳ ನಡುವೆ ನಡೆಯುತ್ತಿರುವ ಎರಡನೇ ಘರ್ಷಣೆ ಇದಾಗಿದೆ.

12 ದಶಲಕ್ಷ ಟನ್ ಉಕ್ಕುಉತ್ಪಾದನಾ ಯೋಜನೆಗೆ ವಿರುದ್ಧವಾಗಿ ರಸ್ತೆ ತಡೆ ನಡೆಸುತ್ತಿದ್ದ ಗುಂಪನ್ನು ತೆರವು ಮಾಡಲು ಪರಗುಂಪು ಯತ್ನಿಸಿದಾಗ ಉಭಯ ತಂಡಗಳ ನಡುವೆ ಘರ್ಷಣೆ ಸಂಭವಿಸಿತು. ಗ್ರಾಮಸ್ಥರು ಕಚ್ಚಾ ಬಾಂಬ್‌ಗಳನ್ನು ಪರಸ್ಪರ ಎಸೆದಾಗ ಘರ್ಷಣೆ ಸಂಭವಿಸಿತು. ಭಾನುವಾರದಿಂದ ವ್ಯಾಪಕ ಹಿಂಸಾಚಾರ ಸಂಭವಿಸಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡರು.

ಪೋಸ್ಕೊ ಪ್ರತಿರೋಧ ಸಂಗ್ರಾಮ ಸಮಿತಿ ಕಾರ್ಯಕರ್ತರು ಶಿಬಿರ ಹೂಡಿರುವ ಸ್ಥಳದಲ್ಲಿ ಈ ಘರ್ಷಣೆ ಸಂಭವಿಸಿದೆ.ಯೋಜನೆಗೆ ಬೆಂಬಲ ನೀಡುತ್ತಿರುವ ಸ್ಥಳೀಯರ ಒಂದು ಗುಂಪು ಬಲಿತುತಾದಲ್ಲಿ ರಸ್ತೆ ತಡೆಯನ್ನು ಸುಮ್ಮನೆ ತೆರವು ಮಾಡಿದರೆ ಸಾಲದು.

ಶಿಬಿರವನ್ನೇ ತೆರವು ಮಾಡಬೇಕೆಂದು ಆಗ್ರಹಿಸಿದರು. ಆಗ ಪೋಸ್ಕೊ ವಿರೋಧಿ ಕಾರ್ಯಕರ್ತರು ನಿರಾಕರಿಸಿದಾಗ ಯೋಜನೆಯ ಬೆಂಬಲಿಗರು ಅವರ ಮೇಲೆ ಕಲ್ಲುತೂರಿದರೆಂದು ಹೇಳಲಾಗಿದೆ. ಇದರಿಂದಾಗಿ ಉಭಯ ತಂಡಗಳ ನಡುವೆ ತೀವ್ರ ಘರ್ಷಣೆಗೆ ನಾಂದಿಯಾಯಿತು.
ಮತ್ತಷ್ಟು
ಭಾರತ-ಇಯು ನಡುವೆ ಸಹಕಾರ ವೃದ್ಧಿ
ವಿವಾದಿತ ಸಾಲು ಹಿಂಪಡೆದ ನಸ್ರೀನ್
ಪಪ್ಪು ಯಾದವ್‌ಗೆ ಜಾಮೀನು ನಿರಾಕರಣೆ
ರಿಜ್ವಾನುರ್ ಆತ್ಮಹತ್ಯೆಗೆ ಕುಮ್ಮಕ್ಕು
ಮರುಪ್ರತಿಕ್ರಿಯೆಗೆ ಕರುಣಾನಿಧಿ ನಿರಾಕರಣೆ
ರಷ್ಯಾ ಮಹಿಳೆ ಮೇಲೆ ಆಸಿಡ್ ದಾಳಿ