ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮುಖಭಂಗ:ಮಲೇಶಿಯ ಜತೆ ಚರ್ಚೆ
PTI
ಮಲೇಶಿಯ ಸರ್ಕಾರದ ಸಚಿವ ನಾಜ್ರಿ ಅಜೀಜ್ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಮುಖಭಂಗ ಮಾಡಿದ ವಿಷಯವನ್ನು ಮಲೇಶಿಯ ಸರ್ಕಾರದ ಜತೆ ಸಮಾಲೋಚಿಸುವುದಾಗಿ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಲೋಕಸಭೆಯಲ್ಲಿ ಶುಕ್ರವಾರ ತಿಳಿಸಿದರು. ಕೌಲಾಲಂಪುರದಲ್ಲಿ ನ.25ರಂದು ಭಾರತೀಯ ಜನಾಂಗದ ಜನರನ್ನು ಮಲೇಶಿಯ ಪೊಲೀಸರು ಥಳಿಸಿದ ಘಟನೆ ಬಗ್ಗೆ ಕರುಣಾನಿಧಿ ನೋವು ತೋಡಿಕೊಂಡಿದ್ದಕ್ಕೆ ಮಲೇಶಿಯ ಸಚಿವರು ಕರುಣಾನಿಧಿ ಅವರನ್ನು ಸುಮ್ಮನಿರಿಸಿದ್ದರು.

ವಿದೇಶದಲ್ಲಿ ವಾಸಿಸುವ ಭಾರತೀಯ ಮೂಲದ ಜನರ ಏಳಿಗೆ ಬಗ್ಗೆ ಸರ್ಕಾರ ತೀವ್ರ ಕಾಳಜಿ ಹೊಂದಿದೆ ಎಂದು ಹೇಳಿದ ಅವರು ಮಲೇಶಿಯದಲ್ಲಿ ಭಾರತೀಯ ಮೂಲದ ಅಪಾರ ಸಂಖ್ಯೆಯ ಜನರಿದ್ದು, ಅವರು ಆ ದೇಶದ ಪೌರರಾಗಿದ್ದಾರೆಂದು ಹೇಳಿದರು.

ಮಲೇಶಿಯ ಜತೆ ನಮಗೆ ಸ್ನೇಹಸಂಬಂಧವಿದ್ದು, ಆ ರಾಷ್ಟ್ರದ ಅಧಿಕಾರಿಗಳ ಜತೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪರ್ಕ ಹೊಂದಿರುವುದಾಗಿ ಅವರು ನುಡಿದರು. ಈ ವಿಷಯವು ಗುರುವಾರ ಮತ್ತು ಶುಕ್ರವಾರ ಲೋಕಸಭೆಯಲ್ಲಿ ಕಲಾಪಕ್ಕೆ ಅಡ್ಡಿಯಾಗಿ ಸಂಸದರು ಪಕ್ಷಭೇದ ಮರೆತು ಮಲೇಶಿಯ ಸರ್ಕಾರದ ಜತೆ ಕರುಣಾನಿಧಿ ಅವರಿಗೆ ಅವಮಾನ ಮಾಡಿದ ವಿಷಯವನ್ನು ಪ್ರಸ್ತಾಪಿಸುವಂತೆ ಒತ್ತಾಯಿಸಿದ್ದರು.
ಮತ್ತಷ್ಟು
ಏಮ್ಸ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಸ್ತು
ಅಬ್ದುಲ್ ಕರೀಂಗೆ ಮತ್ತೆ 7 ವರ್ಷ ಶಿಕ್ಷೆ
ಅಬ್ದುಲ್ ಕಲಾಂ ಇ-ಪೇಪರ್ ಬಿಡುಗಡೆ
ಪೋಸ್ಕೊ ಯೋಜನೆ:ಪರ-ವಿರೋಧಿಗಳ ಕದನ
ಭಾರತ-ಇಯು ನಡುವೆ ಸಹಕಾರ ವೃದ್ಧಿ
ವಿವಾದಿತ ಸಾಲು ಹಿಂಪಡೆದ ನಸ್ರೀನ್