ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಏಮ್ಸ್ ನಿರ್ದೇಶಕ ವೇಣುಗೋಪಾಲ್ ವಜಾ
ವಿವಾದಿತ ಏಮ್ಸ್ (ಎಐಐಎಂಎಸ್) ಮಸೂದೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಹಿ ಹಾಕಿದ ಕೆಲವೇ ಗಂಟೆಗಳಲ್ಲಿ ಏಮ್ಸ್ ನಿರ್ದೇಶಕ ಡಾ| ಪಿ.ವೇಣುಗೋಪಾಲ್ ಅವರನ್ನು ಪದಚ್ಯುತಗೊಳಿಸಲಾಗಿದೆ. ಇವರ ಸ್ಥಾನಕ್ಕೆ ಡಾ| ತಿರತ್ ದಾಸ್ ಡೋಗ್ರಾರನ್ನು ಉಸ್ತುವಾರಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಬಿಜೆಪಿ ಮತ್ತು ಎಐಎಡಿಎಂಕೆಗಳ ತೀವ್ರ ವಿರೋಧದ ನಡುವೆ ಬುಧವಾರ ಸಂಸತ್ತಿನಲ್ಲಿ ಏಮ್ಸ್ ತಿದ್ದುಪಡಿ ಮಸೂದೆ ಪಾಸು ಮಾಡಲಾಗಿತ್ತು. ಎರಡು ದಿನಗಳ ಬಳಿಕ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಲಭಿಸಿರುವುದು ವೇಣುಗೋಪಾಲರನ್ನು ಹುದ್ದೆಯಿಂದ ತೆಗೆದು ಹಾಕಲು ಹಾದಿ ಸುಗಮವಾಗಿಸಿದೆ.

ಆ.2007ರಲ್ಲಿ ಸಂಸತ್ತಿನಲ್ಲಿ ಈ ಮಸೂದೆಯನ್ನು ಮಂಡಿಸಲಾಗಿತ್ತು. ನಿರ್ದೇಶಕರ ಅಧಿಕಾರಾವಧಿ 5 ವರ್ಷಗಳ ತನಕ ಅಥವಾ ಅವರು65 ವರ್ಷಗಳನ್ನು ಪೂರೈಸುವ ತನಕ ಎಂದು ಮಸೂದೆಯಲ್ಲಿ ನಿಗದಿ ಮಾಡಲಾಗಿದೆ. ಈ ತಿದ್ದುಪಡಿ ಮಸೂದೆಯು ನಿರ್ದೇಶಕ ಅಧಿಕಾರಾವಧಿ ಮುಗಿಯುವ ಮುನ್ನವೇ ಮೂರು ತಿಂಗಳ ನೋಟೀಸ್ ಮೂಲಕ ತೆಗೆಯಲು ಸರ್ಕಾರಕ್ಕೆ ಹಕ್ಕು ನೀಡುತ್ತದೆ.

ನಿರ್ದೇಶಕರ ಹುದ್ದೆ "ಕಾಲಾವಧಿಯ ನೇಮಕ"ವಾಗಿದ್ದು ಸಮರ್ಥನೀಯ ಕಾರಣವಿಲ್ಲದೇ ಅದನ್ನು ಮೊಟಕುಗೊಳಿಸುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯ ಈ ಮಸೂದೆಯನ್ನು ಮಂಡಿಸಿತ್ತು.

ಈ ಕ್ರಮದ ವಿರುದ್ಧ ವೇಣುಗೋಪಾಲ್ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದು, ಅವರನ್ನು ಬೆಂಬಲಿಸುವ ಏಮ್ಸ್ ವೈದ್ಯರು ಮುಷ್ಕರಕ್ಕೆ ಇಳಿದಿದ್ದರು. ದೆಹಲಿ ಹೈಕೋರ್ಟ್ ಮುಷ್ಕರದ ವಿರುದ್ಧ ಕಠಿಣ ಪದಗಳನ್ನು ಬಳಸಿದ್ದರಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.
ಮತ್ತಷ್ಟು
ಮುಖಭಂಗ:ಮಲೇಶಿಯ ಜತೆ ಚರ್ಚೆ
ಏಮ್ಸ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಸ್ತು
ಅಬ್ದುಲ್ ಕರೀಂಗೆ ಮತ್ತೆ 7 ವರ್ಷ ಶಿಕ್ಷೆ
ಅಬ್ದುಲ್ ಕಲಾಂ ಇ-ಪೇಪರ್ ಬಿಡುಗಡೆ
ಪೋಸ್ಕೊ ಯೋಜನೆ:ಪರ-ವಿರೋಧಿಗಳ ಕದನ
ಭಾರತ-ಇಯು ನಡುವೆ ಸಹಕಾರ ವೃದ್ಧಿ