ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತವರುನೆಲದಲ್ಲಿ ವಘೇಲಾ, ಮೋದಿ ಸೆಣಸು
PTI
ಉತ್ತರ ಗುಜರಾತ್ ಜಿಲ್ಲೆ ಮೆಹಸಾನಾ, ಕೇಂದ್ರ ಸಚಿವ ಮತ್ತು ಬಿಜೆಪಿಯ ಮಾಜಿ ನಾಯಕ ಶಂಕರಸಿಂಗ್ ವಘೇಲಾ ಮತ್ತು ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ತವರುನೆಲದಲ್ಲಿ ತಮ್ಮ ಪ್ರಭಾವವನ್ನು ಪರೀಕ್ಷೆಗೆ ಒಡ್ಡುವ ರಣರಂಗವಾಗಿದೆ. ವಘೇಲಾ ಮತ್ತು ಮೋದಿ ಇಬ್ಬರೂ ಈ ಜಿಲ್ಲೆಗೆ ಸೇರಿದವರಾಗಿದ್ದು, 7 ಕ್ಷೇತ್ರಗಳನ್ನು ಹೊಂದಿರುವ ಈ ಜಿಲ್ಲೆ ಡಿ.16ರಂದು ಎರಡನೇ ಹಂತದ ಚುನಾವಣೆಗೆ ಕಾಲಿಡುತ್ತಿದೆ.

ವಘೇಲಾ 1995ರಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದರಿಂದ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಪದಚ್ಯುತರಾಗಿದ್ದರು. ತರುವಾಯ ಪಕ್ಷದಿಂದ ಹೊರನಡೆದ ಅವರು ರಾಷ್ಟ್ರೀಯ ಜನತಾ ಪಕ್ಷ ಸ್ಥಾಪನೆ ಮಾಡಿ ಕಾಂಗ್ರೆಸ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಬಳಿಕ ತಮ್ಮ ರಾಜಕೀಯ ಸಂಘಟನೆಯನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದರು.
ವಘೇಲಾ ಪ್ರಭಾವ ಈ ಪ್ರದೇಶದಲ್ಲಿ ಕುಂದಿದೆ ಎನ್ನುವುದು ಜನರ ಭಾವನೆಯಾಗಿದೆ.

ಚೌಧುರಿ ಸಮುದಾಯದ ನಾಯಕ ಮತ್ತು ವಘೇಲಾ ಪೋಷಿತ ವಿಪುಲ್ ಚೌಧರಿ, ವಘೇಲಾ ದಣಿದಿದ್ದಾರೆ ಮತ್ತು ನಿವೃತ್ತರಾಗಿದ್ದಾರೆಂದು ನಿರಾಶೆಯ ಧ್ವನಿಯಲ್ಲಿ ಹೇಳುತ್ತಾರೆ. ಪಟೇಲ್ ಮತ್ತು ಠಾಕೂರ್ ಸಮುದಾಯದ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಬಿಜೆಪಿ ತನ್ನ ಹಿಡಿತ ಹೊಂದಿದೆ. ಕೇಸರಿ ಪಕ್ಷವು ಅನಿಲ್ ಪಾಟೀಲ್ ಎಂಬವರನ್ನು ತನ್ನ ಅಭ್ಯರ್ಥಿಯಾಗಿ ನಿಲ್ಲಿಸಿದೆ ಹಾಗೂ ಕಾಂಗ್ರೆಸ್ ನರೇಶ್ ರಾವಲ್ ಅವರನ್ನು ಕಣಕ್ಕಿಳಿಸಿದೆ.
ಮತ್ತಷ್ಟು
ಕುಷ್ಠರೋಗದ ಕಳಂಕ: ವಿವಾಹಕ್ಕೆ ಬಾಧಕ
ಏಮ್ಸ್ ನಿರ್ದೇಶಕ ವೇಣುಗೋಪಾಲ್ ವಜಾ
ಮುಖಭಂಗ:ಮಲೇಶಿಯ ಜತೆ ಚರ್ಚೆ
ಏಮ್ಸ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಸ್ತು
ಅಬ್ದುಲ್ ಕರೀಂಗೆ ಮತ್ತೆ 7 ವರ್ಷ ಶಿಕ್ಷೆ
ಅಬ್ದುಲ್ ಕಲಾಂ ಇ-ಪೇಪರ್ ಬಿಡುಗಡೆ