ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರೈಲುಗಳ ಡಿಕ್ಕಿ:40 ಪ್ರಯಾಣಿಕರಿಗೆ ಗಾಯ
ಉತ್ತರ ಬಿಹಾರದ ಸಹರ್ಸಾ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ರೈಲು ಇನ್ನೊಂದು ರೈಲಿಗೆ ಡಿಕ್ಕಿ ಹೊಡೆದು ಕನಿಷ್ಠ 40 ಜನರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸಹರ್ಸಾ-ಫೋರ್ಬೆಸ್‌ಗಂಜ್ ರೈಲು ನಿಂತಿದ್ದ ಸಹರ್ಸಾ-ಕಟಿಹಾರ್ ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆಯಿತು.

ಪ್ಲಾಟ್‌ಫಾರಂ ನ.3ರಿಂದ ಬೆಳಿಗ್ಗೆ 7 ಗಂಟೆಗೆ ಅದು ಪ್ರಯಾಣಿ ಆರಂಭಿಸಬೇಕಿತ್ತು. ಸಹರ್ಸಾ-ಕಟಿಹಾರ್ ರೈಲಿನ ಕಾವಲುಗಾರನ ಕ್ಯಾಬಿನ್‌ಗೆ ತೀವ್ರ ಹಾನಿವುಂಟಾಗಿದ್ದು, ಸುಮಾರು 40 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಿಂದ ಆಕ್ರೋಶಗೊಂಡ ಪ್ರಯಾಣಿಕರು ಸಹಾಯಕ ಸ್ಟೇಷನ್ ಮ್ಯಾನೇಜರ್ ಅಲೋಕ್ ಕುಮಾರ್ ಮೇಲೆ ಹಲ್ಲೆ ನಡೆಸಿದರು. ಸಹರ್ಸಾ-ಫೋರ್ಬೆಸ್‌ಗಂಜ್ ರೈಲಿನ ಚಾಲಕನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಮತ್ತಷ್ಟು
ಭಾರತದಲ್ಲಿ 30 ಲಕ್ಷ ಮಂದಿಗೆ ಎಚ್‌ಐವಿ
ತವರುನೆಲದಲ್ಲಿ ವಘೇಲಾ, ಮೋದಿ ಸೆಣಸು
ಕುಷ್ಠರೋಗದ ಕಳಂಕ: ವಿವಾಹಕ್ಕೆ ಬಾಧಕ
ಏಮ್ಸ್ ನಿರ್ದೇಶಕ ವೇಣುಗೋಪಾಲ್ ವಜಾ
ಮುಖಭಂಗ:ಮಲೇಶಿಯ ಜತೆ ಚರ್ಚೆ
ಏಮ್ಸ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಸ್ತು