ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಎಚ್‌ಐವಿ ನಿರ್ಮೂಲನೆ ಗುರಿಗೆ ಸ್ವಯಂಸೇವೆ
ಯುವಕರು ಕಂಪ್ಯೂಟರ್, ಬ್ಯಾಂಕಿಂಗ್ ಮತ್ತು ಉತ್ಪಾದನೆ ಕ್ಷೇತ್ರಗಳಲ್ಲಿ ವೃತ್ತಿಜೀವನ ಆರಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಮುಂಬೈ ಸಬರ್ಬ್‌ನ ಕೆಲವು ಯುವಕರು ಎಚ್‌ಐವಿ ನಿರ್ಮೂಲನೆಯ ಭಿನ್ನ ಮಾರ್ಗವನ್ನು ಹಿಡಿದಿದ್ದಾರೆ. ಅವರಲ್ಲಿ 26 ವರ್ಷ ವಯಸ್ಸಿನ ಮಹೇಶ್ ಯಾದವ್ ಎಂಬ ಯುವಕ ಭಿವಂಡಿಯ ಬೀದಿಗಳಲ್ಲಿ ಲೈಂಗಿಕ ಕಾಯಿಲೆಗಳ ಬಗ್ಗೆ ಪ್ರಚಾರಕ್ಕೆ ಬೀದಿನಾಟಕಗಳನ್ನು ಆಡುತ್ತಿದ್ದಾನೆ.

ಇಂತಹ ಕಷ್ಟದ, ಭಿನ್ನವಾದ ಮತ್ತು ಪರಿಪೂರ್ಣತೆಯ ಕೆಲಸವನ್ನು ಆಯ್ಡುಕೊಂಡ ಯುವಸಂತತಿಯಲ್ಲಿ ಇವನು ಕೂಡ ಒಬ್ಬ. ಬಟ್ಟೆಗೆ ಬಣ್ಣಹಾಕುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಯಾದವ್ ಈಗ ಎನ್‌ಜಿಒನಲ್ಲಿ ಕೆಲಸ ಮಾಡುತ್ತಾನೆ. ಇದರಿಂದ ಅವನಿಗೆ ಬೇರೆ ಕೆಲಸಗಳ ರೀತಿಯಲ್ಲಿ ಹಣ ಸಿಗುವುದಲ್ಲದೇ ಸಮಾಜಕ್ಕೆ ಸೇವೆ ಸಲ್ಲಿಸಿದ ಸಂತೃಪ್ತಿಯ ಭಾವ ಮೂಡುತ್ತದೆಂದು ಹೇಳುತ್ತಾನೆ.

ಭಿವಂಡಿಯಲ್ಲಿ ಕೆಲಸ ಮಾಡುವ 70 ಮಂದಿ ಸ್ವಯಂ ಸೇವಕರಲ್ಲಿ ಮಹೇಶ್ ಕೂಡ ಒಬ್ಬ. ಕಾಮಾಟಿಪುರದ ಕೆಂಪು ದೀಪದ ಪ್ರದೇಶಗಳು, ವಾಷಿ, ಬಾಂಡುಪ್-ಸೋನಾಪುರ್, ಘಾಟ್ಕೊಪರ್ ಮತ್ತು ಧಾರವಿ ಮುಂತಾದ ಕಡೆ ಪಾಪ್ಯುಲೇಷನ್ ಸರ್ವಿಸಸ್ ಇಂಟರ್‌ನ್ಯಾಷನಲ್ ಎಂಬ ಸರ್ಕಾರ-ಎನ್‌ಜಿಒ ಸಹಭಾಗಿತ್ವದಲ್ಲಿ ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಈ ಯುವಕರ ತಂಡ ರೋಗ ನಿರ್ಮೂಲನೆಗೆ ಅವಿರತ ಶ್ರಮಿಸುತ್ತಿದ್ದಾರೆ.

ಮನೆಯಿಂದ ಮನೆಗೆ ಹೋಗುವ ತಂಡ ಎರಡು ವಿಧದ ಜನರ ಜತೆ ಕೆಲಸ ಮಾಡುತ್ತದೆ. ಒಂದು ಗುಂಪು ಲೈಂಗಿಕ ಕಾರ್ಯಕರ್ತೆಯರಿಗೆ ಸಲಹೆ, ಸೂಚನೆ ನೀಡುವುದಕ್ಕೆ ಗಮನ ಕೇಂದ್ರೀಕರಿಸಿದರೆ ಇನ್ನೊಂದು ಗುಂಪು ಗ್ರಾಹಕರತ್ತ ಗಮನ ಹರಿಸಿದೆ.

30 ಲಕ್ಷ ಎಚ್‌ಐವಿ ಪ್ರಕರಣವಿರುವ ಈ ದೇಶದಲ್ಲಿ ಇದೊಂದೇ ಪರಿಹಾರ ಎಂದು ಅವರು ನುಡಿದರು. ಇದೊಂದು ಖಂಡಿತವಾಗಿ ತ್ಯಾಗ, ನಿಸ್ವಾರ್ಥ ಮತ್ತು ನಿಷ್ಠೆಯ ಮನೋಭಾವದಿಂದ ಕೂಡಿದ ಕೆಲಸ.
ಮತ್ತಷ್ಟು
ರೈಲುಗಳ ಡಿಕ್ಕಿ:40 ಪ್ರಯಾಣಿಕರಿಗೆ ಗಾಯ
ಭಾರತದಲ್ಲಿ 30 ಲಕ್ಷ ಮಂದಿಗೆ ಎಚ್‌ಐವಿ
ತವರುನೆಲದಲ್ಲಿ ವಘೇಲಾ, ಮೋದಿ ಸೆಣಸು
ಕುಷ್ಠರೋಗದ ಕಳಂಕ: ವಿವಾಹಕ್ಕೆ ಬಾಧಕ
ಏಮ್ಸ್ ನಿರ್ದೇಶಕ ವೇಣುಗೋಪಾಲ್ ವಜಾ
ಮುಖಭಂಗ:ಮಲೇಶಿಯ ಜತೆ ಚರ್ಚೆ