ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪಾರ್ಸೆಲ್ ಬಾಂಬ್ ಸ್ಫೋಟಿಸಿ ಬಾಲಕ ಸಾವು
ಇಲ್ಲಿನ ವನಾರಪೇಟ್‌ನಲ್ಲಿ ಶನಿವಾರ ಸಂಭವಿಸಿದ ಬಾಂಬ್‌ಸ್ಫೋಟದಲ್ಲಿ 12 ವರ್ಷ ವಯಸ್ಸಿನ ಬಾಲಕನೊಬ್ಬ ಸತ್ತಿದ್ದು, ಅವನ ಮೂವರು ಸ್ನೇಹಿತರು ಗಾಯಗೊಂಡಿದ್ದಾರೆ. ವಿಜಯ್ ಮತ್ತು ಅವನ ಸ್ನೇಹಿತರು ಎಫ್‌ಸಿಐ ಗೋದಾಮು ಸಮೀಪ ರೈಲುಹಳಿಗಳ ಬಳಿ ಆಟವಾಡುತ್ತಿದ್ದಾಗ ಪಾಲಿಥೀನ್ ಚೀಲದಲ್ಲಿ ಸುತ್ತಿದ ಪಾರ್ಸೆಲ್ ಅವರ ಕಣ್ಣಿಗೆ ಬಿತ್ತು. ವಿಜಯ್ ಚೀಲವನ್ನು ತೆರೆದಾಗ ಪಾರ್ಸೆಲ್ ಸ್ಫೋಟಿಸಿ ಅವನು ಸ್ಥಳದಲ್ಲೇ ಸತ್ತ.

ಅವನ ಸ್ನೇಹಿತರಾದ ವಿಕಿ, ತಮಿಳ್ ಸೆಲ್ವನ್ ಮತ್ತು ಸೂಸೈ ರಾಜ್ ಗಾಯಗೊಂಡಿದ್ದಾರೆ. ಮೂವರನ್ನೂ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಉದ್ವಿಗ್ನ ಪರಿಸ್ಥಿತಿ ಮೂಡಿದ್ದರಿಂದ ಪೊಲೀಸ್ ಕಾವಲನ್ನು ಗ್ರಾಮದಲ್ಲಿ ಹಾಕಲಾಗಿದೆ.
.
ಅದೇ ಪ್ರದೇಶದಲ್ಲಿ ನಸುಕಿನಲ್ಲಿ ಎಐಎಡಿಎಂಕೆ ಕಾರ್ಯಕರ್ತನ ಮನೆಯಲ್ಲಿ ನಾಡಬಾಂಬೊಂದು ಸ್ಫೋಟಿಸಿದ ಇನ್ನೊಂದು ಘಟನೆ ನಡೆದಿದೆ.
ಮತ್ತಷ್ಟು
ಎಚ್‌ಐವಿ ನಿರ್ಮೂಲನೆ ಗುರಿಗೆ ಸ್ವಯಂಸೇವೆ
ರೈಲುಗಳ ಡಿಕ್ಕಿ:40 ಪ್ರಯಾಣಿಕರಿಗೆ ಗಾಯ
ಭಾರತದಲ್ಲಿ 30 ಲಕ್ಷ ಮಂದಿಗೆ ಎಚ್‌ಐವಿ
ತವರುನೆಲದಲ್ಲಿ ವಘೇಲಾ, ಮೋದಿ ಸೆಣಸು
ಕುಷ್ಠರೋಗದ ಕಳಂಕ: ವಿವಾಹಕ್ಕೆ ಬಾಧಕ
ಏಮ್ಸ್ ನಿರ್ದೇಶಕ ವೇಣುಗೋಪಾಲ್ ವಜಾ