ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ
PTI
ವಿಶ್ವ ಏಡ್ಸ್ ದಿನದ ಅಂಗವಾಗಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ "ರೆಡ್ ರಿಬ್ಬನ್ ಎಕ್ಸ್‌ಪ್ರೆಸ್" ರೈಲಿಗೆ ಚಾಲನೆ ನೀಡಿದರು. ಈ ರೈಲು ರಾಷ್ಟ್ರಾದ್ಯಂತ ಎಚ್‌ಐವಿ-ಏಡ್ಸ್ ನಿವಾರಣೆ ಸಂದೇಶದೊಂದಿಗೆ ಸಂಚರಿಸುತ್ತದೆ. ಮಾರಕ ಕಾಯಿಲೆಯಾದ ಎಚ್‌ಐವಿ ವಿರುದ್ಧ ಆಂದೋಳನವು ಗೆಲ್ಲಲೇಬೇಕಾದ ಸಮರ ಎಂದು ಒತ್ತಿಹೇಳಿದ ಸೋನಿಯಾ, ಏಡ್ಸ್ ರೋಗಿಗಳನ್ನು ಸಾಮಾಜಿಕವಾಗಿ ಕಡೆಗಣಿಸುವ ವಿರುದ್ಧ ಹೋರಾಡುವ ಅಗತ್ಯವನ್ನು ಪ್ರತಿಪಾದಿಸಿದರು.

ಈ ಯೋಜನೆಯು ರೋಗದ ವಿರುದ್ಧ ಹೋರಾಟವನ್ನು ಮುಖ್ಯವಾಹಿನಿಗೆ ತರುತ್ತದೆ ಎಂದು ಸೋನಿಯಾ ಹೇಳಿದರು. ಏಡ್ಸ್ ಪ್ರಮುಖವಾದ ಆರೋಗ್ಯ ಸಮಸ್ಯೆಯಾಗಿ ಮುಂದುವರಿದಿದೆ. ವಿಶ್ವದಲ್ಲಿ ಯಾವುದೇ ಕಾಯಿಲೆ ಇಂತಹ ದುಷ್ಪರಿಣಾಮ ಬೀರಿಲ್ಲ. ಯೌವನದ ಹೊಸ್ತಿಲಲ್ಲಿರುವ ಯುವಕರು ಮತ್ತು ಯುವತಿಯರು ಏಡ್ಸ್ ಮಾರಿಗೆ ಬಲಿಯಾಗಿದ್ದಾರೆಂದು ಅವರು ವಿಷಾದದಿಂದ ನುಡಿದರು.

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಮತ್ತು ಭಾರತೀಯ ರೈಲ್ವೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರಲ್ಲಿ ಸುರಕ್ಷಿತ ನಡವಳಿಕೆಗೆ ಉತ್ತೇಜನ ನೀಡಲು ವಿಶೇಷ ರೈಲು ಓಡಿಸುವ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ರೈಲ್ವೆ ಸಚಿವ ಲಾಲು ಪ್ರಸಾದ್ ಇದೇ ಉದ್ದೇಶಕ್ಕಾಗಿ ಸರ್ಕಾರ ಇನ್ನೊಂದು ರೈಲನ್ನು ಒದಗಿಸುವುದಾಗಿ ಹೇಳಿದರು.

ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲು ಯೋಜನೆಯು ಪ್ರಾಥಮಿಕತಡೆ ಸೇವೆ ಸಂಬಂಧಿಸಿದ ಮಾಹಿತಿ, ರೋಗದ ಬಗ್ಗೆ ತಿಳಿವಳಿಕೆ, ಏಡ್ಸ್ ರೋಗಿಗಳ ವಿರುದ್ಧ ತಾರತಮ್ಯ ಮತ್ತು ಅಂಟಿರುವ ಕಳಂಕ ತೊಡೆಯುವುದು ಮತ್ತು ಪ್ರತಿಬಂಧಕ ಕ್ರಮಗಳು,ಆರೋಗ್ಯ ಅಭ್ಯಾಸಗಳು ಮತ್ತು ಜೀವನಶೈಲಿ ಬಗ್ಗೆ ಜನರ ಜ್ಞಾನವನ್ನು ಹೆಚ್ಚಿಸುವುದು.

23 ರಾಜ್ಯಗಳಿಗೆ ಭೇಟಿ ನೀಡುವ ಮುನ್ನ ರೈಲು ಆಳ್ವಾರ್ ಮತ್ತು ಜೈಪುರಕ್ಕೆ ಹೋಗುತ್ತದೆ. 2009 ಡಿ.1ರಂದು ಅದು ದೆಹಲಿಗೆ ಹಿಂತಿರುಗುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಿದ 7 ಬೋಗಿಗಳ ಈ ರೈಲಿನ ಮೂಲಕ ಏಡ್ಸ್ ವಿರುದ್ಧ ಸಮರ ಸಾರುವ ಯೋಜನೆಯನ್ನು ರಾಜೀವ್ ಗಾಂಧಿ ಪ್ರತಿಷ್ಠಾನ ಹುಟ್ಟುಹಾಕಿತು.
ಮತ್ತಷ್ಟು
ಪಾರ್ಸೆಲ್ ಬಾಂಬ್ ಸ್ಫೋಟಿಸಿ ಬಾಲಕ ಸಾವು
ಎಚ್‌ಐವಿ ನಿರ್ಮೂಲನೆ ಗುರಿಗೆ ಸ್ವಯಂಸೇವೆ
ರೈಲುಗಳ ಡಿಕ್ಕಿ:40 ಪ್ರಯಾಣಿಕರಿಗೆ ಗಾಯ
ಭಾರತದಲ್ಲಿ 30 ಲಕ್ಷ ಮಂದಿಗೆ ಎಚ್‌ಐವಿ
ತವರುನೆಲದಲ್ಲಿ ವಘೇಲಾ, ಮೋದಿ ಸೆಣಸು
ಕುಷ್ಠರೋಗದ ಕಳಂಕ: ವಿವಾಹಕ್ಕೆ ಬಾಧಕ