ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮಹಿಳಾ ಕ್ರಿಕೆಟ್ ಆಟಗಾರ್ತಿ ಆತ್ಮಹತ್ಯೆ
ರಾಜ್ಯದ ಸೀನಿಯರ್ ತಂಡಕ್ಕೆ ಆಯ್ಕೆಯಾಗಲು ವಿಫಲವಾದ ಬಗ್ಗೆ ತೀವ್ರ ಹತಾಶರಾದ ಭರವಸೆಯ ಮಹಿಳಾ ಕ್ರಿಕೆಟ್ ಆಟಗಾರ್ತಿ 23 ವರ್ಷ ವಯಸ್ಸಿನ ಜುಮಾ ಸರ್ಕಾರ್ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಾಳದ 19 ವರ್ಷಗಳ ಒಳಗಿನ ತಂಡದಲ್ಲಿ ಸ್ಥಾನ ಪಡೆದಿದ್ದ ಅವರು, ಕೊಲ್ಕತಾ ವಿವಿ ಆಟಗಾರರೂ ಆಗಿದ್ದರು. ನಾಡಿಯ ಜಿಲ್ಲೆಯ ಹನ್ಸ್ಕಲಿಯಲ್ಲಿರುವ ತಮ್ಮ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ಬಟ್ಟೆಯಿಂದ ನೇಣು ಹಾಕಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡರು.

ಆಕೆಯ ಸಹಆಟಗಾರ್ತಿಯರು ಮುಂದುವರಿದು ತಾನು ಹಿಂದುಳಿದಿದ್ದಕ್ಕೆ ಆಕೆ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ಅವರ ಕೋಚ್ ಸ್ವಪನ್ ಸಾಧು ಹೇಳಿದ್ದಾರೆ.
ಬೆಂಗಾಳ ತಂಡಕ್ಕೆ ಸ್ಥಾನ ಪಡೆಯಲು ವಿಫಲವಾದ್ದರಿಂದ ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹನ್ಸಕಲಿ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.

ಸರ್ಕಾರ್ ಪ್ರತಿಭಾವಂತರಾಗಿದ್ದರೂ ಮಹತ್ವಾಕಾಂಕ್ಷಿಯಾಗಿದ್ದರು ಎಂದು ಸ್ವಪನ್ ಸಾಧು ಹೇಳಿದರು. ಯಶಸ್ಸು ಸಾಧಿಸಬೇಕೆಂಬ ಆತುರ ಆಕೆಗಿತ್ತು. ತನ್ನ ವಯಸ್ಸಿನ ಯುವತಿಯರು ಮುಂದುವರಿದಿದ್ದನ್ನು ಕಂಡು ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ಅವರು ಹೇಳಿದಳು.
ಮತ್ತಷ್ಟು
ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ
ಪಾರ್ಸೆಲ್ ಬಾಂಬ್ ಸ್ಫೋಟಿಸಿ ಬಾಲಕ ಸಾವು
ಎಚ್‌ಐವಿ ನಿರ್ಮೂಲನೆ ಗುರಿಗೆ ಸ್ವಯಂಸೇವೆ
ರೈಲುಗಳ ಡಿಕ್ಕಿ:40 ಪ್ರಯಾಣಿಕರಿಗೆ ಗಾಯ
ಭಾರತದಲ್ಲಿ 30 ಲಕ್ಷ ಮಂದಿಗೆ ಎಚ್‌ಐವಿ
ತವರುನೆಲದಲ್ಲಿ ವಘೇಲಾ, ಮೋದಿ ಸೆಣಸು