ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
2 ವರ್ಷದಲ್ಲಿ 7000 ಯೋಧರ ರಾಜೀನಾಮೆ
ಗಡಿಭದ್ರತಾ ಪಡೆ 42ನೇ ಸಂಸ್ಥಾಪನಾ ದಿನವನ್ನು ಶುಕ್ರವಾರ ಆಚರಿಸಿತು.ಆದಾಗ್ಯೂ, ಭಾರತದ ರಕ್ಷಣಾ ಪಡೆಯಲ್ಲಿ ಎಲ್ಲವೂ ಸರಿಯಾಗಿಲ್ಲವೆಂದು ಕಂಡುಬರುತ್ತಿದೆ. ಕಳೆದ 2 ವರ್ಷಗಳಲ್ಲಿ 7000 ಬಿಎಸ್‌ಎಫ್ ಯೋಧರು ಪಡೆಯನ್ನು ತ್ಯಜಿಸಿ ಹುಟ್ಟೂರಿಗೆ ಹಿಂತಿರುಗಿದ್ದಾರೆ. ಒಂದು ವರ್ಷದ ಕೆಳಗೆ ಭಲವಂತ ಸಿಂಗ್ ಯಾದವ್ ಗಡಿಭದ್ರತಾ ಪಡೆಯ ಯೋಧ. ಅವನ ಸಮವಸ್ತ್ರ ಅವನಿಗೆ ಗೌರವ, ಉತ್ತಮ ಜೀವನ ಮತ್ತು ಸಂಪತ್ತನ್ನು ತಂದುಕೊಟ್ಟಿತು.

ಆದರೂ ಭಲವಂತ ಸಿಂಗ್ ಎಲ್ಲವನ್ನೂ ತ್ಯಜಿಸಿ ದೆಹಲಿ ಸ್ಥಿರಾಸ್ತಿ ಮಾರಾಟ ಕಂಪೆನಿಯಲ್ಲಿ ಭದ್ರತಾ ಅಧಿಕಾರಿ ಹುದ್ದೆಗೆ ಸೇರಿದರು. ಅದೊಂದು ಭಾವನಾತ್ಮಕ ಮತ್ತು ಕಠಿಣ ನಿರ್ಧಾರವಾಗಿದ್ದರೂ ತಮ್ಮ ಕುಟುಂಬದ ಒಳಿತಿಗಾಗಿ ಅವರು ರಾಜೀನಾಮೆ ನೀಡಬೇಕಾಯಿತು. ಅವರನ್ನು ಶ್ರೀನಗರದಲ್ಲಿ ನಿಯೋಜಿಸಿದ್ದರಿಂದ ರಾಜಧಾನಿಯಲ್ಲಿರುವ ಪತ್ನಿ, ಮಕ್ಕಳನ್ನು ಯೋಗಕ್ಷೇಮ ನೋಡಲು ಆಗಲಿಲ್ಲವಾದ್ದರಿಂದ ಉದ್ಯೋಗ ಬಿಟ್ಟಿದ್ದಾಗಿ ಹೇಳುತ್ತಾರೆ.

ಈ ಪ್ರವೃತ್ತಿಯು ಯೋಧರಲ್ಲಿ ಮಾತ್ರವಲ್ಲದೇ ಹಿರಿಯ ಅಧಿಕಾರಿಗಳಲ್ಲೂ ಬೆಳೆಯುತ್ತಿದೆ. ಉದಾಹರಣೆಗೆ ಉಪ ಕಮಾಂಡೆಂಟ್ ಆಗಿದ್ದ ವಿಭುನಾರಾಯಣ್ ಬಿಎಸ್‌ಎಸ್ ಕೆಲಸಕ್ಕೆ ಇದೇ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದಾರೆ. ಸಮಸ್ಯೆ ನಿವಾರಣೆಗೆ ಏನೇನು ಮಾಡಬೇಕೊ ಎಲ್ಲವನ್ನೂ ನಾವು ಮಾಡುತ್ತಿದ್ದೇವೆ. ಕುಟುಂಬದ ವಾಸ್ತವ್ಯವನ್ನು ಇನ್ನೂ ಹೆಚ್ಚು ಒದಗಿಸಲು ಯತ್ನಿಸುತ್ತಿದ್ದೇವೆಂದು ಬಿಎಸ್‌ಎಫ್ ಹೇಳುತ್ತಿದೆ.

ವರ್ಷಕ್ಕೆ 9 ತಿಂಗಳ ಕಾಲ ಕುಟುಂಬದಿಂದ ದೂರವಿರಿಸುವ ಹುದ್ದೆಗೆ ಅನೇಕ ಬಿಎಸ್‌ಎಫ್ ಸಿಬ್ಬಂದಿ ರಾಜೀನಾಮೆ ನೀಡಿ ಕಾರ್ಪೋರೇಟ್ ಕ್ಷೇತ್ರದ ನೌಕರಿಗಳಿಗೆ ತೆರಳುತ್ತಿದ್ದಾರೆ.ಬಿಎಸ್‌ಎಫ್ ಮಾತ್ರ ತಾವು ಕೈಗೊಂಡಿರುವ ಕ್ರಮಗಳು ಅನೇಕ ಮಂದಿ ನೌಕರರಿಗೆ ಸೂಕ್ತವಾಗುವುದಿಲ್ಲ ಎನ್ನುವುದನ್ನು ಒಪ್ಪಿಕೊಂಡಿಲ್ಲ.
ಮತ್ತಷ್ಟು
ಮಹಿಳಾ ಕ್ರಿಕೆಟ್ ಆಟಗಾರ್ತಿ ಆತ್ಮಹತ್ಯೆ
ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ
ಪಾರ್ಸೆಲ್ ಬಾಂಬ್ ಸ್ಫೋಟಿಸಿ ಬಾಲಕ ಸಾವು
ಎಚ್‌ಐವಿ ನಿರ್ಮೂಲನೆ ಗುರಿಗೆ ಸ್ವಯಂಸೇವೆ
ರೈಲುಗಳ ಡಿಕ್ಕಿ:40 ಪ್ರಯಾಣಿಕರಿಗೆ ಗಾಯ
ಭಾರತದಲ್ಲಿ 30 ಲಕ್ಷ ಮಂದಿಗೆ ಎಚ್‌ಐವಿ