ಹಿಮಾಚಲ್ ಪ್ರದೇಶದ ಸಿಮ್ಲಾ ಜಿಲ್ಲೆಯ ರಾಂಪೂರ್ ಉಪವಿಭಾಗದಲ್ಲಿ ಮದುವೆ ದಿಬ್ಬಣದ ಗಾಡಿ ಆಳವಾದ ಕಮರಿಯೊಂದಕ್ಕೆ ಬಿದ್ದ ಪರಿಣಾಮ 8ಮಹಿಳೆಯರು ಸೇರಿದಂತೆ ಒಟ್ಟು 16 ಜನರು ಸಾವಿಗೀಡಾದ ದಾರುಣ ಘಟನೆ ಭಾನುವಾರ ನಸುಕಿನ ಜಾವ ಜರುಗಿದೆ.
ಈ ಮದುವೆ ದಿಬ್ಬಣದ ಗಾಡಿ ಪಕ್ಕದ ಕುಲ್ಲು ಜಿಲ್ಲೆಯ ದಂಕಾಪತ್ ಎಂಬಲ್ಲಿಂದ ರಾಂಪೂರ್ ಸಮೀಪದ ಕಿಂಗಲ್ ಎಂಬಲ್ಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ 300 ಮೀಟರ್ ಆಳವಾದ ಕಣವಿಗೆ ಬಿದ್ದ ಪರಿಣಾಮ ಗಾಡಿಯಲ್ಲಿದ್ದ 16 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ರಾಂಪೂರ್ ತಹಶೀಲ್ದಾರ ತಿಳಿಸಿದ್ದಾರೆ.
ಈ ಘಟನೆಯಲ್ಲಿ ಅದೃಷ್ಟಾವಶಾತ್ 12 ವರ್ಷದ ಬಾಲಕನೊರ್ವ ಬದುಕಿ ಉಳಿದಿದ್ದು, ಚಿಕಿತ್ಸೆಗಾಗಿ ರಾಂಪೂರ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅವಘಡದಲ್ಲಿ ಸಾವಿಗೀಡಾದ ಪ್ರತಿಯೊಂದು ಕುಟುಂಬದ ಸಂಬಂಧಿಕರಿಗೆ ಜಿಲ್ಲಾಡಳಿತ ತಲಾ 6 ಸಾವಿರ ರೂಪಾಯಿ ಪರಿಹಾರ ಧನ ಘೋಷಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
|