ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಂದಿಗ್ರಾಮ: ತೀರ್ಪಿಗೆ ಗೌರವ ನೀಡಿ-ಗಾಂಧಿ
ನಂದಿಗ್ರಾಮ ವಿಷಯಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈಕೋರ್ಟ್ ನೀಡುವ ತೀರ್ಪಿಗೆ ಪಶ್ಚಿಮ ಬಂಗಾಳ ಸರಕಾರ ಬದ್ಧವಾಗುವುದರೊಂದಿಗೆ ಗೌರವ ನೀಡಬೇಕೆಂದು ಪಶ್ಚಿಮ ಬಂಗಾಳ ರಾಜ್ಯಪಾಲ ಗೋಪಾಲ್‌ಕೃಷ್ಣ ಗಾಂಧಿ ರಾಜ್ಯ ಸರಕಾರಕ್ಕೆ ಆದೇಶಿಸಿದ್ದಾರೆ.

ವ್ಯಾಪಕ ಹಿಂಸಾಚಾರಕ್ಕೊಳಗಾಗುವ ಮೂಲಕ ನಲುಗಿ ಹೋಗಿದ್ದ ನಂದಿಗ್ರಾಮಕ್ಕೆ ರಾಜ್ಯಪಾಲ ಗೋಪಾಲ್ ಕೃಷ್ಣ ಗಾಂಧಿ ಮೊದಲ ಬಾರಿಗೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.

ಸೆಜ್ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಪಕ್ಷದ ಉಪಟಳದಿಂದಾಗಿ ಜರ್ಜರಿತವಾಗಿ ಹೋಗಿದ್ದ ನಂದಿಗ್ರಾಮ, ಹಿಂಸಾಚಾರದಿಂದಾಗಿ ರಾಷ್ಟ್ರಮಟ್ಟದ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.

"ಪೂರ್ವ ಮಿಡ್ನಾಪುರ್ ಜಿಲ್ಲೆಯ ಈ ಪುಟ್ಟ ಗ್ರಾಮ ಹಿಂಸಾಚಾರದ ಕರಿನೆರಳಿನಿಂದ ಹೊರಬರಲು ಇನ್ನಷ್ಟು ದಿನಗಳು ಬೇಕಾಗಬಹುದು" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಗಾಂಧಿ, ನಂದಿಗ್ರಾಮ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ರಾಜ್ಯ ಸರಕಾರ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದರು.

ನವೆಂಬರ್ 9ರ ಘಟನೆ ನಂತರ ಗ್ರಾಮದಲ್ಲಿ ಕಾನಮೂನು ಸುವ್ಯವಸ್ಥೆ ಸಂಪೂರ್ಣ ಮುರಿದುಬಿದ್ದಿದ್ದನ್ನು ಜ್ಞಾಪಿಸಿದ ಅವರು, ಭವಿಷಯದಲ್ಲಿ ಈ ತರಹದ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ರಾಜ್ಯ ಸರಕಾರಕ್ಕೆ ಕಿವಿಮಾತು ಹೇಳಿದರು.
ಮತ್ತಷ್ಟು
ಮಸಣ ಸೇರಿದ ಮದುವೆ ದಿಬ್ಬಣ
2 ವರ್ಷದಲ್ಲಿ 7000 ಯೋಧರ ರಾಜೀನಾಮೆ
ಮಹಿಳಾ ಕ್ರಿಕೆಟ್ ಆಟಗಾರ್ತಿ ಆತ್ಮಹತ್ಯೆ
ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ
ಪಾರ್ಸೆಲ್ ಬಾಂಬ್ ಸ್ಫೋಟಿಸಿ ಬಾಲಕ ಸಾವು
ಎಚ್‌ಐವಿ ನಿರ್ಮೂಲನೆ ಗುರಿಗೆ ಸ್ವಯಂಸೇವೆ